

ಸೇಡಂ: ಬಾಹ್ಯಾಕಾಶ ಲೋಕದಲ್ಲಿ ಹೊಸ ಪ್ರಯತ್ನಗಳನ್ನು ನಡೆಸಿ ಯಶಸ್ವಿಯಾಗಿರುವ ಭಾರತದ ವಿಜ್ಞಾನಿಗಳಿಗೆ ಗೌರವ ಸೂಚಕ ಮತ್ತು ಮಕ್ಕಳಲ್ಲಿ ಜ್ಞಾನ ಬಿತ್ತಲು ಪಟ್ಟಣದ ವಾಸವದತ್ತಾ ವಿದ್ಯಾ ವಿಹಾರ ಶಾಲೆ ಮಕ್ಕಳಿಗೆ ವಿಶೇಷ ಪ್ರಾತ್ಯಕ್ಷಿಕೆ ಮೂಲಕ ತಿಳಿವಳಿಕೆ ನೀಡಲಾಯಿತು.
ಡಾ.ರಾಜೇಶ ಫಾನಗುರಡೆ ನೇತೃತ್ವದ ಅಂತರಿಕ್ಷೆ ಸಂಸ್ಥೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದೀಗ ನೇರ ಶಾಲೆಯಲ್ಲೇ ರಸಪ್ರಶ್ನೆ, ಆಸ್ಟೊçà ಆರ್ಟ್ ಸೇರಿ ವಿವಿಧ ಸ್ಪರ್ಧೆ ನಡೆಸಿ ವಿಜ್ಞಾನದ ಹಲವು ಮಾದರಿ, ವಿಜ್ಞಾನ ಜಗತ್ತಿನಲ್ಲಿ ಆಗುತ್ತಿರುವ ವಿಸ್ಮಯಗಳ ಕುರಿತು ವಿವರಿಸಲಾಯಿತು.
ಗಗನಯಾತ್ರಿಗಳ ಪೂರ್ವ ತರಬೇತಿ, ರಾಕೆಟ್ ತಯಾರಿಕೆ, ಉಡಾವಣೆ ಚಟುವಟಿಕೆ ಕುರಿತು ಮಾಹಿತಿ ನೀಡಲಾಯಿತು. ಪ್ರಾಚಾರ್ಯೆ ವೀಣಾ ರಡ್ಡಿ, ಕಂಪನಿ ಅಧ್ಯಕ್ಷ ವೆಂಕಟಪತಿರಾಜ, ಪಿಆರ್‌ಒ ಪಾರ್ಥಸಾರಥಿ, ಅಂತರಿಕ್ಷ ಯಾನದ ತಂಡದ ಸದಸ್ಯರು ಇದ್ದರು.