ಸೇಡಂ; ಬ್ರಹ್ಮಕುಮಾರಿ ಈಶ್ವರೀಯ ಆಶ್ರಮದಿಂದ ರಕ್ಷಾ ಬಂಧನ

PH 06
Published on

ಸೇಡಂ: ಸಮಾಜದಲ್ಲಿ ಸಾಮರಸ್ಯ ಮೂಡಿಸಿ ಜನರಲ್ಲಿ ಉತ್ತಮ ಬಾಂಧವ್ಯ ಬೆಸೆಯಲು ಹಬ್ಬಗಳು ಸಹಕಾರಿಯಾಗಿವೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕ ಎಂ.ರಾಚಪ್ಪ ಹೇಳಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ಆಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ರಕ್ಷಾ ಬಂಧನ- ಬಾಂಧವ್ಯ ಚಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಕ್ಷಾ ಬಂಧನ ಅನಾದಿಕಾಲದಿಂದಲೂ ನಾವು ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಇದರ ಬಗ್ಗೆ ಗ್ರಂಥಗಳಲ್ಲಿಯೂ ಉಲ್ಲೇಖಗಳಿವೆ. ಪಾಶ್ಚಾತ್ಯ ಜನರು ನಮ್ಮ ಸಂಸ್ಕೃತಿ ಪಾಲಿಸುತ್ತಿದ್ದಾರೆ, ಆದರೆ ನಾವು ಭಾರತೀಯ ಸಂಸ್ಕಾರಗಳನ್ನು ಒಂದೊಂದಾಗಿ ಮರೆತು ಹೋಗುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ಆಶ್ರಮದ ರಾಜಯೋಗಿನಿ ಕಲಾವತಿ ಅಕ್ಕ ಉಪನ್ಯಾಸ ನೀಡಿ, ಮುಂದುವರಿದ ಕಾಲಮಾನದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಸಾಮರಸ್ಯದ ಕೊರತೆಯಿಂದಾಗಿಯೇ ಬಹುತೇಕ ಸಂಬಂಧ ಮುರಿದು ಬಿಳುತ್ತಿರುವುದು ಶೋಚನೀಯ ಸಂಗತಿ. ನಮ್ಮ ಪೂರ್ವಿಕರು ಹಬ್ಬ, ಹರಿದಿನ ಆಚರಣೆ ಮಾಡಿರುವುದರ ಹಿಂದೆ ವೈಜ್ಞಾನಿಕ ಮತ್ತು ಧಾರ್ಮಿಕ ಹಿನ್ನೆಲೆ ಒಳಗೊಂಡಿವೆ ಎಂದರು.

ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ವೀರಶೈವ ಶೈಕ್ಷಣಿಕ ಹಾಗೂ ಕಲ್ಯಾಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಲ್ಲಣ್ಣಗೌಡ ಬೆನಕನಹಳ್ಳಿ, ಇಷ್ಟಸಿದ್ಧಿ ವಿನಾಯಕ ಭಕ್ತ ಮಂಡಳಿ ಅಧ್ಯಕ್ಷ ಶಿವಶರಣಪ್ಪ ಚಂದನಕೇರಿ ಮಾತನಾಡಿದರು.

ಪ್ರಮುಖರಾದ ಪ್ರಭಾಕರ ಜೋಶಿ, ಮಹಿಪಾಲರಡ್ಡಿ ಮುನ್ನೂರ, ಸಿದ್ದಪ್ಪ ತಳ್ಳಳ್ಳಿ, ಡಾ.ಎಂ.ಜಿ.ದೇಶಪಾAಡೆ, ಲಿಂಗಾರೆಡ್ಡಿ ಶೇರಿ, ಡಾ.ಬಿ.ಆರ್.ಅಣ್ಣಾಸಾಗರ, ಆರತಿ ಕಡಗಂಚಿ ಇತರರಿದ್ದರು. ಅಂಜನಾ ಭೋವಿ, ಶಿವಲೀಲಾ ಪ್ರಾರ್ಥಿಸಿದರು. ಸಂತೋಷಕುಮಾರ ತೊಟ್ನಳ್ಳಿ ಸ್ವಾಗತಿಸಿದರು. ಜಗನ್ನಾಥ ತರನಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀದೇವಿ ನಿರೂಪಣೆ ಮಾಡಿದರು. ವೀರಭದ್ರಯ್ಯ ಸ್ವಾಮಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net