

ಸೇಡಂ; ಜೀವನದಲ್ಲಿ ಸಾಧನೆ ಎನ್ನುವ ಕನಸು ಕಟ್ಟಿಕೊಂಡಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಅವಶ್ಯವಾಗಿದ್ದು, ಅದು ಕೊತ್ತಲ ಬಸವೇಶ್ವರ ಸಂಸ್ಥೆಯಲ್ಲಿ ಸಿಗಲಿದೆ ಎನ್ನುವ ವಿಶ್ವಾಸ ನನಗಿದೆ ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ನರೇಂದ್ರ ಬಡಶೇಷಿ ಹೇಳಿದರು.
ನೃಪತುಂಗ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ ಅವರು ಮಾತನಾಡಿದರು. ಗುಣಮಟ್ಟದ ಶಿಕ್ಷಣ ಇವತ್ತಿನ ಮಕ್ಕಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳಾದವರು ಬ್ರಾö್ಯಂಡೆಡ್ ಹುಡುಕುತ್ತಾ ಹೋಗಬಾರದು. ನಾವೇ ಬ್ರ್ಯಾಂಡ್ಗಳಾಗಬೇಕು. ನಮ್ಮಲ್ಲಿನ ನ್ಯೂನ್ಯತೆಗಳನ್ನು ತಿಳಿದುಕೊಂಡು ತಿದ್ದಿಕೊಳ್ಳುವ ಮೂಲಕ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಿಕ್ಷಣ ಸಮಿತಿಯ ಸಂರಕ್ಷಕ ಬಸವರಾಜ ಪಾಟೀಲ್ ಸೇಡಂ, ವಿದ್ಯಾರ್ಥಿ ಜೀವನದಲ್ಲಿ ನಮ್ಮ ಗುರಿ ಮತ್ತ ಕನಸು ಹೇಗಿರಬೇಕೆಂದರೆ ನಮ್ಮನ್ನು ಮಲಗಲು ಬಿಡಬಾರದು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಲಿದೆ. ಸದೃಡ ದೇಶ ಮತ್ತು ಸಮಾಜ ನಿರ್ಮಾಣಕ್ಕೆ ನಮ್ಮ ಕೊಡುಗೆ ಅವಿರತವಾಗಿರಬೇಕೆಂದರು.
ಪಾಲಕರ ಪ್ರತಿನಿಧಿ ಯಮುನಾ ಚೌರಾಸಿಯಾ ಮಾತನಾಡಿ, ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉತ್ತಮವಾಗಿ ನಿರ್ಮಾಣಗೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಅವಶ್ಯವಾಗಿದೆ ಎಂದರು.
ಉಪನ್ಯಾಸಕಿ ಡಾ.ಸುವರ್ಣಾ ವಝೆ ಸಮಾವರ್ತನ ಉಪದೇಶ ಮತ್ತು ಸಂಕಲ್ಪ ಬೋಧಿಸಿದರು. ವಿದ್ಯಾರ್ಥಿನಿ ಕೀರ್ತಿರೆಡ್ಡಿ ಪ್ರಾರ್ಥಿಸಿದರು. ನೃಪತುಂಗ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಶಾಮಸುಂದರ ಕಲಾಲ ಸ್ವಾಗತಿಸಿದರು. ಉಪನ್ಯಾಸಕಿ ಅಂಜನಾ ನಿರೂಪಣೆ ಮಾಡಿದರು. ನರ್ಮದಾದೇವಿ ಗಿಲಡಾ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಆರೋಗ್ಯಪ್ಪ ಮುಕ್ತೇದಾರ ವಂದಿಸಿದರು.