ಸೆಸ್ಕ್‌ನಿಂದ ಜನ ಸಂಪರ್ಕ ಸಭೆ

23Rajesh4
Published on

ಚಾಮರಾಜನಗರ: ಕಳೆದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರದಿಂದ ಕೇಳಿಬಂದ ದೂರುಗಳಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್ ತಿಳಿಸಿದರು.

ನಗರದ ಸೆಸ್ಕ್ ಉಪ ವಿಭಾಗ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಕೊರತೆ ಇರುವ ಲೈನ್‌ಮನ್‌ಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗಿದೆ. ಕರಿನಂಜನಪುರ ಗ್ರಾಮದಲ್ಲಿ ಕಬ್ಬಿಣದ ಕಂಬಗಳನ್ನು ಬದಲಾಯಿಸಲು ಅಂದಾಜು ಪಟ್ಟಿ ಸಹ ತಯಾರಿಸಲಾಗಿದೆ. ಮೂಡ್ಲುಪುರ ಗ್ರಾಮದಲ್ಲಿ 100 ಕೆವಿ ಪರಿವರ್ತಕ ಅಳವಡಿಸಲು ಕೋರಿಕೆ ಬಂದ ಹಿನ್ನೆಲೆಯಲ್ಲಿ ಹೆಚ್ಚುವರಿ ಟಿಸಿ ಅಳವಡಿಸಿ ಚಾಲನೆ ನೀಡಲಾಗಿದೆ. ಇಂದಿನ ಸಭೆಯಲ್ಲಿ ಬಂದ ದೂರನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಹೇಶ್, ಕಿರಿಯ ಇಂಜಿನಿಯರ್‌ಗಳಾದ ಚಂದ್ರ ನಾಯಕ, ಮಂಜುನಾಥ್, ನಂಜುಂಡಸ್ವಾಮಿ, ಮಹಾದೇವಸ್ವಾಮಿ, ನಾಗೇಂದ್ರ, ಸಹಾಯಕ ಲೆಕ್ಕಾಧಿಕಾರಿ ಮಂಗಳಾಂಬ, ಸಹಾಯಕ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net