

ಮೈಸೂರು: ತೀರ್ಥಯಾತ್ರೆಗೆ ಹೋದಾಗ ಮನೆಗೆ ನುಗ್ಗಿರುವ ಕಳ್ಳರು, ಅಲ್ಲಿದ್ದ ಬೆಳ್ಳಿ ಪದಾರ್ಥ, ಕಂಚಿನ ಪದಾರ್ಥ ಹಾಗೂ ಕಾರನ್ನು ದೋಚಿ ಪರಾರಿಯಾಗಿದ್ದಾರೆ.
ಪ್ರಕೃತಿ ಬಡಾವಣೆಯ ನಿವಾಸಿ, ಸೆಸ್ಕ್ ಸಿಬ್ಬಂದಿ ಶ್ರೀನಿವಾಸ್ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಕೆಲವು ದಿನಗಳ ಹಿಂದೆ ಶ್ರೀನಿವಾಸ್ ಅವರು ಕುಟುಂಬ ಸಮೇತರಾಗಿ ಮಹಾರಾಷ್ಟ್ರದ ಪಂಡರಾಪುರಕ್ಕೆ ದೇವರ ದರ್ಶನಕ್ಕೆ ತೆರಳಿದ್ದರು.
ಅಲ್ಲಿಂದ ವಾಪಸ್ ಮನೆಗೆ ಹಿಂದಿರುಗಿದಾಗ ಬಾಗಿಲು ತೆರೆದಿತ್ತು. ಒಳಗೆ ಪ್ರವೇಶಿಸಿ ಪರಿಶಿಲಿಸಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. 81,600 ರೂ.ಮೌಲ್ಯದಷ್ಟು ವಸ್ತುಗಳು ಕಳ್ಳತನವಾಗಿವೆ.
ಈ ಸಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.