ಸೆರೆವಾಸ ಅನುಭವಿಸಿದ್ದ ದುರುಗಪ್ಪ

Durugappa
Published on

ಚಿತ್ರದುರ್ಗ: ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಜಿಲ್ಲೆಯ ಕುರುಮರಡಿಕೆರೆಯ ದೊಡ್ಡ ದುರುಗಪ್ಪ ಅವರು ಕೂಡ ಕೆಲ ತಿಂಗಳು ಸೆರೆವಾಸ ಅನುಭವಿಸಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ವಿಷಯ ತಿಳಿದು ಮನದಲ್ಲೇ ಸಂಭ್ರಮಿಸಿದ್ದರು.

ಈಚಲು ಮರದ ಚಳವಳಿ ವೇಳೆ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ ಅವರ ಭಾಷಣಕ್ಕೆ ಪ್ರಭಾವಿತರಾಗಿ ಹೋರಾಟಕ್ಕೆ ಧುಮುಕಿದ್ದರು. ಬ್ರಿಟಿಷರ ವಿರುದ್ಧದ ಹೋರಾಟದ ವೇಳೆ ಪಾವಗಡಕ್ಕೆ ಇವರನ್ನು ಗಡಿಪಾರು ಮಾಡಲಾಗಿತ್ತು.

ಪರಶುರಾಂಪುರ ಠಾಣೆಗೂ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿ, ಸ್ನೇಹಿತರೊಂದಿಗೆ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ್ದರು. ಚಳವಳಿಯಲ್ಲಿದ್ದ ಬದ್ಧತೆಯಿಂದಾಗಿ ಕೆಲ ತಿಂಗಳು ಸೆರೆವಾಸ ಕೂಡ ಅನುಭವಿಸಬೇಕಾಯಿತು ಎನ್ನುವಾಗ 94 ವರ್ಷದ ಅವರ ಕಣ್ಣುಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಕಾಣಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net