ಬೆಂಗಳೂರು: ಆರ್ಟ್ ಆ್ ಲಿವಿಂಗ್ ಸಂಸ್ಥೆಯು ಇತ್ತೀಚೆಗೆ ಯುವ ನಾಯಕ ತರಬೇತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದಂತಹ ಗ್ರಾಮೀಣ ಯುವಕ-ಯುವತಿಯರಿಗೆ ಪ್ರಾರಂಭಿಕ ಹಂತದ ಸೆಕ್ಯೂರಿಟಿ ತರಬೇತಿ ಮತ್ತು ಔದ್ಯೋಗಿಕ ಶಿಬಿರ ಕಾರ್ಯಕ್ರಮದಲ್ಲಿ ೪೩ ಮಂದಿ ಪಾಲ್ಗೊಂಡಿದ್ದರು.
ಯುವರಿಗೆ ಉದ್ಯೋಗವನ್ನು ಕೊಡಿಸಲು ಔದ್ಯೋಗಿಕ ಶಿಬಿರವನ್ನು ನಡೆಸಲಾಯಿತು. ಗ್ರಾಮೀಣ ಯುವಜನತೆಗೆ ಸೆಕ್ಯೂರಿಟಿ ಗಾರ್ಡ್, ಫೋರ್ಮಾನ್, ಹೌಸ್ ಕೀಪಿಂಗ್, ಎಲೆಕ್ಟ್ರಿಷಿಯನ್, ವಾಹನ ಚಾಲಕರು ಮತ್ತು ವೃದ್ಧರ ಆರೈಕೆಗಳಂತಹ ನೌಕರಿಗಳಿಗೆ ತಯಾರು ಮಾಡುವುದು ಇದರ ಉದ್ದೇಶವಾಗಿದೆ. ಪ್ರಥಮ ಹಂತದ ತರಬೇತಿಯು ಮಾ.೧೭ ರಿಂದ ೨೫ ರವರೆಗೆ ನಗರದ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಸಲಾಯಿತು. ೧೮ ರಿಂದ ೩೫ ವರ್ಷಗಳ ೪೩ ಯುವಕರು ಪಶ್ಚಿಮ ಬಂಗಾಳ, ಛತ್ತೀಸ್‌ಘಢ, ಒಡಿಶಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ತಾನ, ಝಾರ್ಖಂಡ್ ಮತ್ತು ದೆಹಲಿಯಿಂದ ಬಂದಿದ್ದ ಯುವಕರು ಭಾಗವಹಿಸಿದ್ದು, ಎರಡು ತಿಂಗಳ ಆನ್-ಜಾಬ್ ತರಬೇತಿಯನ್ನು ಪಡೆದುಕೊಂಡಿದ್ದಾರೆ. ತರಬೇತಿಯಲ್ಲಿ ಯಶಸ್ವಿಗಳಾದವರಿಗೆ ಮಾ. ೨೭ ರಂದು ಉದ್ಯೋಗ ಅವಕಾಶದ ಶಿಬಿರವನ್ನು ಏರ್ಪಡಿಲಾಗಿತ್ತು.
ಈ ಕಾರ್ಯಕ್ರಮವನ್ನು ಸುಮೇರು ಸುರಕ್ಷಾ ಎಲ್ಎಲ್ಪಿಯ ವತಿಯಿಂದ ನಡೆಸಲಾಗಿದ್ದು, ಇದು ಸುಮೇರು ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್‌ನ ಅಂಗವಾಗಿದೆ. ಈ ತರಬೇತಿಯ ಹಿಂದಿರುವ ಗುರಿಯೆಂದರೆ, ಭಾರತದ ಪ್ರತಿಯೊಬ್ಬ ಯುವಕ-ಯುವತಿಯರೂ ಸಹ ತಮ್ಮ ಕುಶಲತೆ ಮತ್ತು ಸಾಮರ್ಥ್ಯಗಳಿಗೆ ತಕ್ಕಂತೆ ತರಬೇತಿಯನ್ನು ಪಡೆಯಬಹುದು ಎಂಬುದಾಗಿದೆ. ೨೦೨೬ ರೊಳಗೆ ಸುಮೇರು ಸುರಕ್ಷಾ ಎಲ್ಎಲ್ಪಿಯು ೧೦,೦೦೦ ಗ್ರಾಮೀಣ ಯುವಕರಿಗೆ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದೆ. ಈ ಯುವಕರಿಗೆ ಉದ್ಯೋಗ ಅವಕಾಶಗಳನ್ನು ನೀಡಿ, ಅವರಿಗೆ ಆರ್ಥಿಕ ಸುರಕ್ಷತೆಯನ್ನು ನೀಡುವ ಗುರಿಯನ್ನು ಹೊಂದಿದೆ. ಮುಂದಿನ ಸೆಕ್ಯೂರಿಟಿ ತರಬೇತಿಯನ್ನು ಮೇ ೧ ರಿಂದ ೧೫ ರವರೆಗೆ ನಡೆಸಲಾಗುತ್ತದೆ.