

ಕಲಘಟಗಿ: ಲಾಕ್ಡೌನ್ನಿಂದ ಬ್ಯಾಂಕ್ಗೆ ತೆರಳಲಾಗದ ಗ್ರಾಹಕರಿಗೆ ಸೆಂಟ್ರಲ್ ಬ್ಯಾಂಕ್ ಮಿತ್ರರು ಅವರ ಮನೆಗೆ ತೆರಳಿ ಹಣ ತಲುಪಿಸುತ್ತಿದ್ದಾರೆ.
ಪಟ್ಟಣದ ಸೆಂಟ್ರಲ್ ಬ್ಯಾಂಕ್ ಮಿತ್ರರಾದ ಮೋಹನ ಕಲ್ಲೇದ, ಈರನಗೌಡ ಮರದನಗೌಡ್ರ, ಮಹಾದೇವಪ್ಪ ಬಸವನಕೊಪ್ಪ ಅವರು ತಾಲೂಕಿನ ವಿವಿಧ ಗ್ರಾಮಗಳ ವೃದ್ಧರು, ವಿಧವೆಯರು, ಅಂಗವಿಕಲರಿಗೆ ಮಾಸಾಶನ, ಜನಧನ, ಪಿ.ಎಂ. ಕಿಸಾನ್, ಮತ್ತಿತರ ಯೋಜನೆಗಳ ಹಣ, ಬ್ಯಾಂಕ್ನ ಇತರ ಸೌಲಭ್ಯಗಳನ್ನು ತಲುಪಿಸುತ್ತಿದ್ದಾರೆ.
ಸೆಂಟ್ರಲ್ ಬ್ಯಾಂಕ್ ಕಲಘಟಗಿ ಶಾಖೆಯಲ್ಲಿ ಒಟ್ಟು 3500 ಪಿಂಚಣಿ ಖಾತೆದಾರರಿದ್ದಾರೆ. ಈ ಮೂವರು ಬ್ಯಾಂಕ್ ಮಿತ್ರರಿಗೆ ಪಟ್ಟಣದ 1, 2, 3ನೇ ವಾರ್ಡ್, ಜಿನ್ನೂರ, ಬೆಲವಂತರ ಗ್ರಾಪಂ ವ್ಯಾಪ್ತಿಯ ಗ್ರಾಹಕರಿಗೆ ಸೇವೆ ಒದಗಿಸುವ ಜವಾಬ್ದಾರಿ ನೀಡಲಾಗಿದೆ. ಇದುವರೆಗೆ 3 ಸಾವಿರ ಗ್ರಾಹಕರಿಗೆ ವಿವಿಧ ಯೋಜನೆಯ ಹಣ ತಲುಪಿಸಲಾಗಿದೆ ಎನ್ನುತ್ತಾರೆ ಬ್ಯಾಂಕ್ ಮಿತ್ರರು.
ಕಾಲು ನೋವು ಇವುದರಿಂದ ಬ್ಯಾಂಕ್ಗೆ ಹೋಗಿ ಹಣ ತರಲಾಗá-ತ್ತಿಲ್ಲ. ಈಗ ಬ್ಯಾಂಕ್ ಮಿತ್ರರೇ ನಮ್ಮನೆಗೆ ಬಂದು ಹಣ ಕೊಡá-ತ್ತಿದ್ದಾರೆ. ಇದರಿಂದ ಬೇರೆಯವರನ್ನು ಕರೆದೊು್ದು ಹಣ ತೆಗೆಸಿಕೊಂಡು ಬರá-ವುದು ತಪ್ಪಿದೆ ಎನ್ನುತ್ತಾರೆ ಪಟ್ಟಣದ ಮೇದಾರ ಓಣಿ ನಿವಾಸಿ ಕಲ್ಲವ್ವ ಚಿಕ್ಕಮಠ.
9 ವರ್ಷಗಳಿಂದ 3500 ರೂ. ಗೌರವಧನದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಮಿತ್ರರಿಗೆ ಗೌರವಧನ ಹೆಚ್ಚಿಸಬೇಕೆಂದು ಜಿಲ್ಲಾ ಬ್ಯಾಂಕ್ ಮಿತ್ರರ ಸಂಘಟನೆ ಕಾರ್ಯದರ್ಶಿ ಮೋಹನ ಕಲ್ಲೆದ ಸರ್ಕಾರಕ್ಕೆ ವಿನಂತಿಸಿದ್ದಾರೆ.