ಸೆಂಟ್ ್ರಾನ್ಸಿಸ್ ಐಪಿಎಸ್‌ಇ ಶಾಲೆಗೆ 13ಚಿನ್ನ

03rajesh1
Published on

ಚಾಮರಾಜನಗರ: ಕರ್ನಾಟಕ ಐಸಿಎಸ್‌ಇ ಕೊಡಗು ಹಾಗೂ ಮೈಸೂರು ವಲಯದ ವತಿಯಿಂದ ಕೊಡಗಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ನಗರದ ರಾಮಸಮುದ್ರ ಸೆಂಟ್ ಫ್ರಾನ್ಸಿಸ್ ಐಸಿಎಸ್‌ಇ ಶಾಲೆಯ ವಿದ್ಯಾರ್ಥಿಗಳು 13 ಪದಕಗಳನ್ನು ಗಳಿಸಿ ಯಶಸ್ವಿಯಾಗಿದ್ದಾರೆ.

ಕೊಡಗಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಟ್ರಾಕ್ ಮತ್ತು ಫೀಲ್ಡ್ ಸ್ಪರ್ಧೆಗಳ ಅಂಡರ್ 14 ಮತ್ತು ಅಂಡರ್ 17 ವಿಭಾಗಗಳಲ್ಲಿ ನಡೆದ ಅಥ್ಲಟಿಕ್ ಕ್ರೀಡಾಕೂಟದಲ್ಲಿ 7 ಚಿನ್ನ, 17 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಅಂಡರ್ 14 ವಿಭಾಗದ ಹರ್ಡಲ್ಸ್‌ನಲ್ಲಿ ವಿದ್ಯಾರ್ಥಿ ಪ್ರಜ್ವಲ್ ಚಿನ್ನದ ಪದಕ, ಬಿ.ಎಸ್.ಲಿಖಿತ ಬೆಳ್ಳಿ ಪದಕ, ಗಣವಿ ಕಂಚಿನ ಪದಕ ಗಳಿಸಿದ್ದಾರೆ.

ಶಾಟ್‌ಪುಟ್ ಕ್ರೀಡೆಯಲ್ಲಿ ಸುದರ್ಶನ್ ಚಿನ್ನ, ಇಮಾಮ್, ಹನ್ನಿಕಾ ಬೆಳ್ಳಿ ಪದಕ ಪಡೆದಿದ್ದಾರೆ.

ಡಿಸ್ಕಸ್ ಥ್ರೋನಲ್ಲಿ ಲಿಖಿತಾ, ಸುದರ್ಶನ್ ಚಿನ್ನದ ಪದಕ, ಜನಿಷಾ, ಇಮಾಮ್ ಬೆಳ್ಳಿ ಪದಕ ಪಡೆದಿದ್ದಾರೆ.

ಇನ್ನು ಅಂಡರ್ 17 ವಿಭಾಗದಲ್ಲಿವ ಲಾಂಗ್‌ಜಂಪ್ ಮತ್ತು ಟ್ರಿಪಲ್ ಜಂಪ್‌ನಲ್ಲಿ ವಿದ್ಯಾರ್ಥಿ ಆದರ್ಶ ಚಿನ್ನದ ಪದಕ, ಚಿತ್ತೇಶ್ ಬೆಳ್ಳಿ ಪದಕ ಮತ್ತು ಹೈ ಜಂಪ್‌ನಲ್ಲಿ ಆಕಾಶ್ ಚಿನ್ನದ ಪದಕ, ಋತೀಶ್ ಕಂಚಿನ ಪದಕ ಗಳಿಸಿದ್ದಾರೆ. ಶಾಟ್ ಪುಟ್‌ನಲ್ಲಿ ಇನಾಮ್, ಆಕಾಶ್ ಚಿನ್ನದ ಪದಕ, ಡಿಸ್ಕಸ್ ಥ್ರೋನಲ್ಲಿ ಸಂಪದಾ, ಆಶಿಷ್ ಚಿನ್ನದ ಪದಕ, ಸಾನ್ವಿ ಬೆಳ್ಳಿ ಪದಕ, ಇಂದ್ರಧನುಷ್ ಕಂಚಿನ ಪದಕ ಪಡೆದಿದ್ದಾರೆ. ಜ್ಯಾವೆಲಿನ್ ಥ್ರೋನಲ್ಲಿ ಆದರ್ಶ್ ಬೆಳ್ಳಿ ಪದಕ, ಆಶಿಷ್, ಚಿಂಥನಾ ಕಂಚಿನ ಪದಕ ಗಳಿಸಿದ್ದಾರೆ. ಹರ್ಡಲ್ಸ್‌ನಲ್ಲಿ ಸಂಪದಾ,ಚಿತ್ತೇಶ್ ಚಿನ್ನದ ಪದಕ, ತನೂಷಾ, ವಿಕಾಸ್ ಬೆಳ್ಳಿ ಪದಕ ಪಡೆದಿದ್ದಾರೆ. 4*100 ಮೀಟರ್ ರಿಲೇಯಲ್ಲಿ ಆದರ್ಶ್, ಆಕಾಶ್, ಇಂದ್ರಧನುಷ್, ಚಿತ್ತೇಶ್ ಬೆಳ್ಳಿ ಪದಕ, ಹ್ಯಾಮರ್ ಥ್ರೋನಲ್ಲಿ ಎಸ್.ಐಶ್ವರ್ಯ, ಇಂದ್ರಧನುಷ್, ಚಿನ್ನದ ಪದಕ, ಅನಾಸ್ ಕಂಚಿ ಪದಕ ಪಡೆದುಕೊಂಡಿದ್ದಾರೆ.

ವಿಜೇತರಾದ ವಿದ್ಯಾರ್ಥಿಗಳಿಗೆ ಸೆಂಟ್ ಫ್ರಾನ್ಸಿಸ್ ಐಸಿಎಸ್‌ಇ ಶಾಲೆಯ ಪ್ರಾಂಶುಪಾಲ ವಂದನೆಯ ಸ್ವಾಮಿ ಪ್ರಭಾಕರ್, ಆಡಳಿತಾಧಿಕಾರಿ ಜೋಸೆಫ್, ಹಾಗೂ ಕ್ರೀಡಾ ವಿಭಾಗದ ಕೋಚ್ ಶಿವು, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕುಮಾರ್ ಹಾಗೂ ಶಾಲಾ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net