ಸೆಂಟ್​ ಜೋಸ್​ೆ ಶಾಲೆ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

Good performance by students of St. Jose's School
ಜಿಲ್ಲಾ ಮಟ್ಟದ ಮೇಲಾಟಗಳ ಸ್ಪರ್ಧೆಯ ವಿವಿಧ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸೇಂಟ್​ ಜೋಸೆಫ್​ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಕರಿದ್ದಾರೆ.
Published on

ವಿಜಯಪುರ : ಇಲ್ಲಿನ ವಜ್ರಹನುಮಾನ ನಗರದ ಸೇಂಟ್​ ಜೋಸೆಫ್​ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮೇಲಾಟಗಳ ಸ್ಪರ್ಧೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ.

ಜಿಪಂ ಉಪನಿರ್ದೇಶಕರ ಕಚೇರಿ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಗರದ ಡಾ. ಬಿ.ಆರ್​. ಅಂಬೇಡ್ಕರ್​ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2024&25 ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿ ಕೆಜಿಎಫ್​ ಕೋಲಾರ ಹಾಗೂ ಶಿವಮೊಗ್ಗದಲ್ಲಿ ಜರುಗಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ವಿಭಾಗದ 4*100 ಮೀ. ರೀಲೆಯಲ್ಲಿ ತನಿಶ್​ ರಾಥೋಡ, ಸುಫಿಯಾನ ಖಾಜಿ, ಸುಜಲ ಮಮದಾಪೂರ, ಶ್ರೇಯಸ್​ ದೇಶಪಾಂಡೆ ವಿದ್ಯಾರ್ಥಿಗಳಿದ್ದ ತಂಡವು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರೌಢ ವಿಭಾಗದ 4*100 ಮೀ. ರೀಲೆಯಲ್ಲಿ ಶ್ರೇಯಸ್​ ತೇಲಿ, ಅಯಾನ ಹತ್ತರಕಿಹಾಳ, ಅಮಾನ್​ ಇಮಾರತವಾಲೆ ಮತ್ತು ಅಜೀತ ಚಹಾಣ ವಿದ್ಯಾರ್ಥಿಗಳ ತಂಡವು ಜಿಲ್ಲಾ ಮಟ್ಟದ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಮುಖ್ಯಸ್ಥೆ ಅನಲೀಸಾ ಬಾಸ್ಕೋ, ಅಧ್ಯಕ್ಷ ಶಾಜು ಜೋಸೆಫ್​, ದೈಹಿಕ ಶಿಕ್ಷಣ ಶಿಕ್ಷಕ ವಿಜಯಕುಮಾರ ಹಳ್ಳದಮನಿ, ಲೋಕೇಶ ಕಾಂಬಳೆ, ಅನಿಲ ತೊರವಿ, ಪ್ರೀತಿ ಕಾಳೆ, ಸವಿತಾ ಕೋಳಿ, ಆನಂದ ಬಿರಾದಾರ, ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net