ಸೆ.೨೧ ರಿಂದ ಅಂತರಾಷ್ಟ್ರೀಯ ಸಮ್ಮೇಳನ

bkt-19-2
ಬಾಗಲಕೋಟೆ ನಗರದ ಬಿವಿವಿ ಸಂಘದ ಇಂಜಿನಿಯರಿಂಗ್ ಕಾಲೇಜಿನ ಸಭಾಭವನದಲ್ಲಿ ಬಿವಿವಿ ಸಂಘದ ತಾಂತ್ರಿಕ ಸಂಸ್ಥೆಯಗಳ ನಿರ್ದೇಶಕ ಡಾ.ಆರ್.ಎನ್.ಹೆರಕಲ್ ಮಾತನಾಡಿದರು. ಮುಖಂಡರಾದ ಬಿಇಸಿ ಪ್ರಾಚಾರ್ಯ ಡಾ.ಬಿ.ಆರ್.ಹಿರೇಮಠ, ಡೀನ್ ಡಾ.ಮಹಾಬಲೇಶ್ವರ ಎಸ್.ಕೆ., ಇದ್ದರು.
Published on

ಬಾಗಲಕೋಟೆ: ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನ ಐಇಇಇ ಉತ್ತರ ಕರ್ನಾಟಕ ಶಾಖೆ ಹಾಗೂ ಐಇಇಇ ಬೆಂಗಳೂರು ವಿಭಾಗದ ಆಶ್ರಯದಲ್ಲಿ ಮಾಹಿತಿ ಶಕ್ತಿಯ ಪ್ರಭಾವ ಎಂಬ ಧ್ಯೇಯದೊಂದಿಗೆ ಸೆ.೨೧ ಮತ್ತು ೨೨ರಂದು ಎರಡು ದಿನಗಳ ಕಾಲ ಅಂತರಾಷ್ಟ್ರೀಯ ಸಮ್ಮೇಳನವನ್ನು ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿವಿವಿ ಸಂಘದ ತಾಂತ್ರಿಕ ಸಂಸ್ಥೆಯಗಳ ನಿರ್ದೇಶಕ ಡಾ.ಆರ್.ಎನ್.ಹೆರಕಲ್ ಹೇಳಿದರು.

ನಗರದ ಬಿವಿವಿ ಸಂಘದ ಇಂಜಿನಿಯರಿಂಗ್ ಕಾಲೇಜಿನ ಸಭಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಕೈಗಾರಿಕೆಗಳಿಗೆ ಮತ್ತು ಸಮಾಜಕ್ಕೆ ಅವಶ್ಯಕತೆ ಇರುವ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ಚರ್ಚಿಸಲು ಈ ಕ್ಷೇತ್ರದ ನಾಯಕರು, ಸಂಶೋಧಕರು ಮತ್ತು ಉದ್ಯಮ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

ಸಮ್ಮೇಳನದಲ್ಲಿ ತಾಯ್ವಾನ್, ಬಾಂಗ್ಲಾದೇಶ, ಇಂಡೋನೇಷಿಯಾ, ಶ್ರೀಲಂಕಾ ಹಾಗೂ ಭಾರತದ ನೋಯಿಡಾ, ಭುವನೇಶ್ವರ, ಜಾರ್ಖಂಡ್, ಜೈಪುರ ಮತ್ತು ಮಹಾರಾಷ್ಟ್ರದಿಂದ ೭೦೦ಕ್ಕೂ ಹೆಚ್ಚು ಪ್ರಬಂಧಗಳು ಆಯ್ಕೆಗಾಗಿ ಬಂದಿದ್ದು, ಇದರಲ್ಲಿ ೯೬ ಪ್ರಬಂಧಗಳು ವಿವಿಧ ಗೋಷ್ಠಿಗಳಲ್ಲಿ ಮಂಡನೆಯಾಗಲಿವೆ. ದೇಶದ ಪ್ರಸಿದ್ಧ ಸಂಸ್ಥೆ ಎಚ್ಛಿ, ಇಸ್ರೋ, ಯುಆರ್‌ಆರ್‌ಸಿ, ಟಿಸಿಎಸ್, ಹನಿವೆಲ್ ಸ್ಯಾಮ್ಸಂಗ್, ಐಐಟಿ ಮತ್ತು ಐಐಎಸ್‌ಸಿಗಳಿಂದ ಪ್ರತಿನಿಽಗಳು ಭಾಗವಹಿಸಲಿದ್ದಾರೆ ಎಂದರು.

ಸಂವಹನ ಮತ್ತು ಸಿಗ್ನಲ್ ಪ್ರೊಸೆಸಿಂಗ್, ಪವರ್ ಇಲೆಕ್ಟ್ರಾನಿಕ್ಸ್ ಮತ್ತು ಕಂಟ್ರೋಲ್ ಸಿಸ್ಟಮ್ಸ್, ರೋಬೊಟಿಕ್ಸ್ ಮತ್ತು ಅಟೋಮೇಷನ್ ಸಿಸ್ಟಮ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್, ಕಂಪ್ಯೂಟಿಂಗ್ ಸಾಧನಗಳು ಮತ್ತು ಸರ್ಕ್ಯೂಟ್‌ಗಳು, ಕಲಿಕೆ ಕಂಪ್ಯೂಟರ್ ಮತ್ತು ಸಾಫ್ಟ್ವೇರ್ ಇಂಜನಿಯರಿಂಗ್, ಇಲೆಕ್ಟ್ರಿಕ್ ವೆಹಿಕಲ್ಸ್ ಅಪ್ಲಿಕೇಶನ್‌ಗಳಲ್ಲಿ ಇಂಟಿಲಿಜೆಂಟ್ ಮೊಬಿಲಿಟಿ ಮತ್ತು ವಿಜ್ಯುವಲ್ ಇಂಟೆಲಿಜೆನ್ಸ್ ಮತ್ತು ಹೆಲ್ತ್ ಕೇರ್ ಅಪ್ಲಿಕೇಶನ್‌ಗಳಲ್ಲಿ ಇಂಟೆಲಿಜೆಂಟ್ ಪರಿಹಾರ ಕುರಿತು ಚರ್ಚೆಗಳು ಎರಡು ದಿನದ ಸಮ್ಮೇಳನದಲ್ಲಿ ನಡೆಯಲಿವೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ೧೮೨ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು , ೯೬ ಸಂಶೋಧಕರ ಪ್ರಬಂಧನ ಮಂಡನೆಯಾಗಲಿವೆ. ೧೧ ಜನ ಹೊರದೇಶದವರು, ಇಬ್ಬರು ಅಮೇರಿಕಾ ದೇಶದಿಂದ ಆನಲೈನ್ ಮೂಲಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಉತ್ತರ ಕರ್ನಾಟಕದ ವಿದ್ಯಾರ್ಥಿಗಳು,ಸಂಶೋಧಕರಿಗೆ ಈ ಸಮ್ಮೇಳನ ಸಹಕಾರಿಯಾಗಲಿದೆ ಎಂದು ಹೇಳಿದರು.

ಬೆಂಗಳೂರಿನ ಕುಶಾಗ್ರಮತಿ ಅನಾಲಿಟಿಕ್ಸ್ ಪ್ರÊೆ.ಲಿಮಿಟೆಡ್‌ನ ಸಿಇಒ, ಸ್ಟಾರ್ಟಪ್ ಮೆಂಟರ್ ಡಾ.ಅನಂತ ಕೊಪ್ಪರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಸ್ಯಾಮಸಂಗ್ ಸಂಸ್ಥಾಪಕ ಡಾ.ಅಲೋಕನಾಥ್ ಡಿ, ಬೆಂಗಳೂರಿನ ಐಐಎಸ್‌ಸಿ ಪೋಟೊನಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಟಿ.ಶ್ರೀನಿವಾಸ, ಯುಆರ್‌ಆರ್‌ಎಸ್‌ಸಿ ಮುಖ್ಯಸ್ಥ ಪುನೀತ್‌ಕುಮಾರ್ ಮಿಶ್ರಾ, ಇಸ್ರೋ ವಿಜ್ಞಾನಿ ಡಾ.ಚಂದ್ರಕಾಂತ ಕುಮಾರ್, ಹಾವೇರಿ ವಿಶ್ವವಿದ್ಯಾಲಯ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಿವವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಮುಖಂಡರಾದ ಬಿಇಸಿ ಪ್ರಾಚಾರ್ಯ ಡಾ.ಬಿ.ಆರ್.ಹಿರೇಮಠ, ಡೀನ್ ಡಾ.ಮಹಾಬಲೇಶ್ವರ ಎಸ್.ಕೆ., ಡಾ.ವಿಜಯಲಕ್ಷಿ÷್ಮÃ ಜಿಗಜಿನ್ನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net