

ಚಿತ್ರದುರ್ಗ:ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಸಹಯೋಗದಲ್ಲಿ 38ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಸಮಾರೋಪ ಸ ಮಾರಂಭವನ್ನು ನಗರದ ಬಸವೇಶ್ವರ ಆಸ್ಪತ್ರೆ ಆವರಣದಲ್ಲಿ ಸೆ.8 ರಂದು ಮಧ್ಯಾಹ್ನ 12ಗಂಟೆಗೆ ಏರ್ಪಡಿಸಲಾಗಿದೆ. ಆಸ್ಪತ್ರೆ ಅಧೀಕ್ಷಕ ಡಾ. ಎಲ್.ಪಾಲಾಕ್ಷಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಡೀನ್ ಡಾ.ಇ.ಪ್ರಶಾಂತ್ ಮತ್ತಿತರರು ಉಪಸ್ಥಿತರಿರುತ್ತಾರೆ. ಈ ಪಾಕ್ಷಿಕ ಆಚರಣೆಗೆ ಸಹಕರಿಸಿ ದವರನ್ನು ಸನ್ಮಾನಿಸಲಾಗುವುದು ಎಂದು ಕಾರ‌್ಯಕ್ರಮದ ಸಂಚಾಲಕ ಎಸ್.ವೀರೇಶ್ ತಿಳಿಸಿದ್ದಾರೆ.