

ಹಾಸನ: ಪಾಂಚಜನ್ಯ ಹಿಂದೂ ಗಣಪತಿ ಸಮಿತಿ ವತಿಯಿಂದ ಸೆ. 7 ರಂದು ಹಾಸನಾಂಬ ಕಲಾಕ್ಷೇತ್ರ ಆವರಣದಲ್ಲಿ ಪಾಂಚಜನ್ಯ ಹಿಂದೂ ಗಣಪತಿ ಪ್ರತಿಷಾ ್ಟಪನೆ ಮಾಡಲಾಗುವುದು ಎಂದು ಸಮಿತಿಯ ಕಾರ್ಯದರ್ಶಿ ವೇಣುಗೋಪಾಲ್ ತಿಳಿಸಿದರು.
ನಗರದಲ್ಲಿ ಕಳೆದ 15 ವರ್ಷದಿಂದ ಪಾಂಚಜನ್ಯ ಹಿಂದೂ ಗಣಪತಿ ಉತ್ಸವ ನಡೆಸಿಕೊಂಡು ಬರಲಾಗುತ್ತಿದ್ದು ಅದೇ ರೀತಿ ಸೆ.7 ರಂದು ಹಾಸನಾಂಬ ಕಲಾಕ್ಷೇತ್ರದಲಿ ್ಲ ಗಣಪತಿ ಪ್ರತಿಷಾ ್ಟಪಿಸಲಾಗುವುದು. ಪ್ರತಿನಿತ್ಯ ಮ 12 ರಿಂದ ಸಂಜೆ 8 ರವರೆಗೆ ಮಹಾಮಂಗಳಾರತಿ ನಡೆಯಲಿದ್ದು ಸೆ. 12 ರಂದು ವಿಸರ್ಜಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
6 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಸೆ. 7 ರ ಶನಿವಾರ ಸಂಜೆ 6 ರಿಂದ ವಾಣಿನಾಗೇಂದ್ರ ಮತ್ತು ಸೃಷ್ಟಿನಾಗ್ ರವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸೆ. 8 ರಂದು 4 ರಿಂದ 6 ವರ್ಷದ ಮಕ್ಕಳಿಗೆ ಶ್ರೀ ಗಣೇಶನ ಚಿತ್ರಕಲಾ ಸ್ಪರ್ಧೆ, 7 ರಿಂದ 10ವರ್ಷದ ಮಕ್ಕಳಿಗೆ ಜೇಡಿ ಮಣ್ಣಿನ ಗಣೇಶ ಮೂರ್ತಿ ರಚನೆ, 10 ರಿಂದ 14ವರ್ಷದ ರಾಮಾಯಣ ಹಾಗೂ ಮಹಾಭಾರತ ಪಾತ್ರಗಳ ಛದ್ಮವೇಷಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿಜೇತರಿಗೆ ಆಕರ್ಷಕಬಹುಮಾನ ನೀಡಲಾಗುವುದು.ಸಂಜೆ 6 ರಿಂದ ಕುಟುಂಬ ಪ್ರಭೋದನ ಕಾರ್ಯಕ್ರಮವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಾಂಚಜನ್ಯ ಹಿಂದೂ ಗಣಪತಿ ಸಮಿತಿ ಅಧ್ಯಕ್ಷ ವಾಸು, ರವಿ ಸೋಮು, ಲಾವಣ್ಯ, ಶರತ್ ಇದ್ದರು.