

ಚಿತ್ರದುರ್ಗ: ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಆ.22ರಿಂದ ಆರಂಭವಾಗಿರುವ ತೆರಿಗೆ ವಸೂಲಿ ವಿಶೇಷ ಅಭಿಯಾನ ಸೆಪ್ಟೆಂಬರ್ 5ರ ವರೆಗೆ ನಡೆಯಲಿದೆ ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ. ಶೇ.100 ತೆರಿಗೆ ವಸೂಲಿ ಗ್ರಾಪಂಗಳ ಪ್ರಾಥಮಿಕ ಹೊಣೆಗಾರಿಕೆಯಾಗಿದೆ. ಸಂಪನ್ಮೂಲ ಕ್ರೂಢೀಕರಿಸಲು ಕರ ವಸೂಲಿಯನ್ನು ಒಂದು ವಿಶೇಷ ಅಂದೋಲನವನ್ನಾಗಿ ನಡೆಸಬೇಕಾಗಿದೆ. ತಾಪಂ ಇಒ ಒಳಗೊಂಡಂತೆ ಪಿಡಿಒಗಳ ನೇತೃತ್ವದಲ್ಲಿ ತಂಡ ರಚಿಸಿಕೊಂಡು, ಕಡ್ಡಾಯವಾಗಿ ತೆರಿಗೆ ವಸೂಲಿ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಗತಿ ಸಾಧ್ಯವಾಗದಿದ್ದರೆ ಇಒಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ.