ಸೆ.4ರಂದು ಕಕ್ಕೇರಾ ಪುರಸಭೆ ಚುನಾವಣೆ

ydg7
Published on

ಕಕ್ಕೇರಾ: ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೆ.4ರಂದು ಚುನಾವಣೆ ನಡೆಯಲಿದೆ ಎಂದು ತಹಸೀಲ್ದಾರ್, ಚುನಾವಣಾಧಿಕಾರಿ ಕೆ.ವಿಜಯಕುಮಾರ ಆದೇಶ ಹೊರಡಿಸುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಆದರೆ ಕಕ್ಕೇರಾ ಪುರಸಭೆಯಲ್ಲಿ ಪೂರ್ಣ ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಆಕಾಂಕ್ಷಿಗಳು ಪಕ್ಷದ ಸ್ಥಳೀಯ ಮುಖಂಡರ ಸಹಕಾರ ಮತ್ತು ಸಮುದಾಯಗಳ ಮುಖಂಡರೊAದಿಗೆ ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದೆ.
ಒಟ್ಟು 23 ಸದಸ್ಯ ಬಲದ ಪುರಸಭೆಯಲ್ಲಿ 17 ಕಾಂಗ್ರೆಸ್, 6 ಬಿಜೆಪಿ ಸದಸ್ಯರಿದ್ದಾರೆ. 12 ಮ್ಯಾಜಿಕ್ ಸಂಖ್ಯೆಗಿAತಲೂ ಹೆಚ್ಚು ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಹೊಂದಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಸೆ.4ರಂದು ಬುಧವಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಅಂದು ಬೆಳಗ್ಗೆ 10ಕ್ಕೆ ನಾಮಪತ್ರ ಸಲ್ಲಿಕೆ, ಮಧ್ಯಾಹ್ನ 12ಕ್ಕೆ ನಾಮಪತ್ರ ಪರಿಶೀಲನೆ, ಮತ್ತು ನಿಗದಿಪಡಿಸಿದ ಅವಧಿಯೊಳಗೆ ನಾಮಪತ್ರ ಹಿಂಪಡೆಯಬಹುದು. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಬಿಸಿಎ)ಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ(ಎಸ್‌ಟಿ)ಗೆ ಮೀಸಲಾಗಿದೆ.
ಅಧ್ಯಕ್ಷ ಸ್ಥಾನಕ್ಕಾಗಿ ವಾರ್ಡ್ ನಂ. 4ರ ಪರಮಣ್ಣ ಕಮತಗಿ ಮತ್ತು 23ನೇ ವಾರ್ಡ್ ಸಣ್ಣ ಅಯ್ಯಾಳಪ್ಪ ಪೂಜಾರಿ (ಬಡಿಗೇರ)ತೀವ್ರ ಲಾಭಿ ನಡೆಸುತ್ತಿದ್ದು, ಈ ಇಬ್ಬರ ಮಧ್ಯೆ ಮೂರನೇಯವರಿಗೆ ಲಾಭವಾಗಲಿದೆ ಎಂಬ ಕಾರಣಕ್ಕಾಗಿ ವಾರ್ಡ್ ನಂ.1ರ ಶ್ರೀದೇವಿ ಕುರಿ ಮತ್ತು 19ನೇ ವಾರ್ಡ್ನ ಪರಮವ್ವ ಮಲಮುತ್ತೇರ ಸದ್ದು-ಗದ್ದಲವಿಲ್ಲದೆ ಇದರ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಆರು ಜನ ಸದಸ್ಯರ ಹೆಸರು ಕೇಳಿ ಬರುತ್ತಿವೆ. ಆದರೆ ಪ್ರಮುಖ ಸದಸ್ಯರು ಉಪಾಧ್ಯಕ್ಷ ಸ್ಥಾಕ್ಕೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
2021ರ ಡಿಸೆಂಬರ್‌ನಲ್ಲಿ ಪುರಸಭೆಗೆ ಸಾರ್ವತ್ರಿಕ ಚುನಾವಣೆ ನಡೆದು 16 ಕಾಂಗ್ರೆಸ್, 6 ಬಿಜೆಪಿ ಸದಸ್ಯರು ಹಾಗೂ ಒಬ್ಬರು ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿದ್ದರು. ಪಕ್ಷೇತರ ಸದಸ್ಯರೊಬ್ಬರು ಆಗ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರಿಂದ 17ಜನ ಸದಸ್ಯರೊಂದಿಗೆ ಅಧಿಕಾರದ ಗದ್ದುಗೆಗೇರಲು ಮೀಸಲಾತಿಗಾಗಿ ಎರಡುವರೆ ವರ್ಷ ಕಾಯುವಂತಾಯಿತು.

ಸದಸ್ಯರಾಗಿ ಆಯ್ಕೆಯಾಗಿದ್ದರೂ ಪುರಸಭೆಯಲ್ಲ್ಲಿ ಅಧಿಕಾರಿಗಳ ಅಗೌರವ ನಡೆಯಿಂದ ನಮಗೆ ಬೆಲೆ ನೀಡುತ್ತಿರÀಲಿಲ್ಲ ಹಾಗೂ ನಮ್ಮ ವಾರ್ಡ್ಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಪಕ್ಷಾತೀತವಾಗಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಅಧಿಕಾರದ ಪಟ್ಟಕ್ಕೇರುವ ಕಾಲ ಸನ್ನಿಹಿತವಾಗಿದ್ದು ಇನ್ನೊಂದು ವಾರದೊಳಗೆ ಅಧ್ಯಕ್ಷ-ಉಪಾಧ್ಯಕ್ಷ ಆಕಾಂಕ್ಷಿಗಳು ಕಾಯಬೇಕಿದೆ.

ಒಟ್ಟಾರೆ ಅಧ್ಯಕ್ಷ ಸ್ಥಾನಕ್ಕಾಗಿ ನಾಲ್ವರು ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಆರು ಜನ ಪುರಸಭೆ ಸದಸ್ಯರು ಟೊಂಕಕಟ್ಟಿ ತಮ್ಮ ತಮ್ಮ ಗಾಡ್ ಫಾದರ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಸೆ.4ರಂದು ನಡೆಯುವ ಚುನಾವಣೆಯಲ್ಲಿ ಯಾರು ಅಧ್ಯಕ್ಷ-ಉಪಾಧ್ಯಕ್ಷರಾಗುತ್ತಾರೆ ಎಂಬುದು ಮಾತ್ರ ಹೊರಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net