ಮೈಸೂರು: ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಷನ್, ಜೆಎಸ್‌ಎಸ್ ಫಾರ್ಮಸಿ ಕಾಲೇಜಿನಿಂದ ಸೆ.22ರಂದು ‘ಔಷಧಾಲಯ ಬಲಪಡಿಸುವ ಆರೋಗ್ಯ ಸಮಸ್ಯೆಗಳು’ ಘೋಷವಾಕ್ಯದಡಿ ವಿಶ್ವ ಫಾರ್ಮಸಿಸ್ಟ್ ದಿನ ಆಚರಿಸಲಾಗುವುದು ಎಂದು ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎ.ಪ್ರಮೋದ್‌ಕುಮಾರ್ ತಿಳಿಸಿದರು.
ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ಶ್ರೀರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ಡ್ರಗ್ಸ್ ಮತ್ತು ಫಾರ್ಮಾಸ್ಯುಟಿಕಲ್ ಮ್ಯಾನುಫ್ಯಾಕ್ಚರ್ಸ್ ಅಸೋಸಿಯೇಷನ್ (ಕೆಡಿಪಿಎಂಎ) ಅಧ್ಯಕ್ಷ ಹರೀಶ್ ಕೆ.ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಜೆಎಸ್‌ಎಸ್ ಅಕ್ಯಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್‌ನ ರಿಜಿಸ್ಟ್ರಾರ್ ಡಾ.ಬಿ.ಮಂಜುನಾಥ ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಧನೆ ಮಾಡಿರುವ ಕಾಲೇಜಿನ ಮೂವರು ಹಳೆಯ ವಿದ್ಯಾರ್ಥಿಗಳಾದ ಡಾ.ಕೃಷ್ಣಮೂರ್ತಿ ಭಟ್, ಡಾ.ಎಂ.ಎಸ್.ಲೋಕೇಶ್ ಪ್ರಸಾದ್, ಸುಬ್ರಹ್ಮಣ್ಯಕುಮಾರ್ ಕುಂಟಿಕಾನಮಠ ಅವರನ್ನು ಸನ್ಮಾನಿಸಲಾಗುವುದು. ಜತೆಗೆ ವಿಶ್ವ ಫಾರ್ಮಾಸಿಸ್ಟರ ದಿನದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಷನ್ ಮೈಸೂರು ಶಾಖೆಯ ಗೌರವ ಕಾರ್ಯದರ್ಶಿ ಡಾ.ಆರ್.ಎಸ್.ಚಂದನ್, ಪದಾಧಿಕಾರಿಗಳಾದ ಡಾ.ಮಂಜುನಾಥ್, ಡಾ.ಕೌಶಿಕ್, ಡಾ.ಬಿ.ಎಂ.ಗುರುಪಾದಯ್ಯ ಇದ್ದರು.