ಸೆ.17ರಂದು 'ಮೆಲ್ಲುಸಿರೆ ಸವಿಗಾನ' ಚತುರ್ಭಾಷಾ ಗೀತ ಗಾಯನ

Published on

ಮೈಸೂರು: ವಿದ್ಯುಲ್ಲಹರಿ ಹಾಗೂ ಭೂಮಿಕ ಅಸೋಸಿಯೇಟ್ಸ್‌ನಿಂದ ಸೆ.17ರಂದು ‘ಮೆಲ್ಲುಸಿರೆ ಸವಿಗಾನ’ ಚತುರ್ಭಾಷಾ ಗೀತ ಮಾಧುರ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಜಗನ್ಮೋಹನ ಅರಮನೆಯಲ್ಲಿ ಅಂದು ಸಂಜೆ 5.30ರಿಂದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕನ್ನಡ, ಹಿಂದಿ, ತಮಿಳು, ತೆಲಗು ಭಾಷೆಯ ಹಳೆ ಹಾಡುಗಳ ಗಾಯನ ಪ್ರಸ್ತುತ ಪಡಿಸಲಾಗುವುದು ಎಂದು ವಿದ್ಯುಲ್ಲಹರಿಯ ಅಧ್ಯಕ್ಷ ಡಾ.ಎ.ಡಿ.ಶ್ರೀನಿವಾಸನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನನ್ನೊಂದಿಗೆ ಡಾ.ಸೋಮನಾಥ್ ವಾಸುದೇವ್, ಎ.ಎಸ್.ಶ್ರೀಹರಿ, ಡಾ.ಸ್ನೇಹಶ್ರೀ ನಿರ್ಮಲ್‌ಕುಮಾರ್, ಹಂಸಿಣಿ ಎಸ್.ಕುಮಾರ್, ಡಾ.ಎಸ್.ಪದ್ಮಶ್ರೀ ಗಾಯನ ಪ್ರಸ್ತುತ ಪಡಿಸಲಿದ್ದಾರೆ. ಈ ಹಿಂದೆಯೂ ಎರಡು ಬಾರಿ ಅದ್ಧೂರಿಯಾಗಿ ಇಂತಹ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಅದ್ದೂರಿ ತನಕ್ಕೆ ಕಡಿವಾಣ ಹಾಕಿ ಕರೊಕೆ ಸಂಗೀತಕ್ಕೆ ಗಾಯಕರು ಧ್ವನಿಗೂಡಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಅವಕಾಶವಿದೆ ಎಂದು ಹೇಳಿದರು.
ವಿದ್ಯುಲ್ಲಹರಿ ಗೌರವ ಕಾರ್ಯದರ್ಶಿ ಎಸ್.ಶಶಿಕುಮಾರ್ ಮಾತನಾಡಿ, ಎಂಜಿನಿಯರುಗಳೇ ಸೇರಿಕೊಂಡು ರಚಿಸಿರುವ ವಿದ್ಯುಲ್ಲಹರಿಯಲ್ಲಿ ಹೊಸ ಪ್ರತಿಭೆಗಳಿಗೂ ಅವಕಾಶ ಕಲ್ಲಿಸಲಾಗುತ್ತಿದೆ. ಹಾಗಾಗಿ ಇಂಜಿನಿಯರುಗಳು ಮಾತ್ರವಲ್ಲೇ ವೈದ್ಯರು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರದವರಿಗೆ ಗಾಯನಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು.
ಹಾಸ್ಯ ಕಲಾವಿದ ಮೈಸೂರು ಆನಂದ್, ಸಂಸ್ಥೆಯ ಸುರೇಶ್, ರಾಜೇಂದ್ರ ಪ್ರಸಾದ್, ಆನಂದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net