ಸೆ.16ಕ್ಕೆ 'ರಿಯಾ' ಚಿತ್ರ ಬಿಡುಗಡೆ

Published on

ಮೈಸೂರು: ಮಹಿಳಾ ನಿರ್ದೇಶಕಿ ವಿಜಯಾ ನರೇಶ್ ಅವರು ನಿರ್ದೇಶಿಸಿರುವ ಸಸ್ಪೆನ್ಸ್, ಹಾರರ್ ಹಾಗೂ ಥ್ರಿಲ್ಲರ್ ಕಥಾ ವಸ್ತುವುಳ್ಳ ‘ರಿಯಾ’ ಚಿತ್ರ ಸೆ.16ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.
ಕೊಡಗಿನ ಕುಶಾಲನಗರದಲ್ಲಿಯೇ ಹೆಚ್ಚಿನ ಭಾಗ ಚಿತ್ರೀಕರಣಗೊಂಡಿದ್ದು, 14 ಪಾತ್ರಗಳ ಸುತ್ತ ಒಂದೇ ಮನೆಯಲ್ಲಿ ಸಾಗುವ ಕತೆ ಇದಾಗಿದೆ. ಮಹಿಳಾ ನಿರ್ದೇಶಕಿ ಚಿತ್ರವನ್ನು ನಿರ್ದೇಶಿಸಿರುವುದು ವಿಶೇಷ ಎಂದು ಚಿತ್ರದ ನಾಯಕ ಕಾರ್ತಿಕ್ ವರ್ಣೀಕರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಮೈಸೂರಿನ ಅನನ್ಯ ನಿರ್ವಹಿಸಿದ್ದು, ನಾಯಕ ನಟರಾಗಿ ನಾನು ಅಭಿನಯಿಸಿದ್ದೇನೆ. ಈಗಾಗಲೇ ಚಿತ್ರದ ಟ್ರೆಲರ್ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ, ಕಾತುರ ಹುಟ್ಟುಹಾಕಿದೆ. ಹೀಗಾಗಿ ಚಿತ್ರ ಯಶಸ್ವಿಯಾಗುವ ನಿರೀಕ್ಷೆಯಿದೆ ಎಂದರು.
ಕತೆ, ಚಿತ್ರಕತೆ ಬರೆದಿದ್ದಲ್ಲದೇ ಚಿತ್ರವನ್ನೂ ವಿಜಯಾ ಅವರು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಬಿ.ಆರ್.ಹೇಮಂತ್‌ಕುಮಾರ್ ಸಂಗೀತ ನೀಡಿದ್ದಾರೆ ಎಂದು ವಿವರಿಸಿದರು.
ನಿರ್ಮಾಪಕ ನರೇಶ್, ಚಿತ್ರದ ನಾಯಕಿ ಅನನ್ಯ, ನಟರಾದ ಸಾವಿತ್ರಿ ಕೃಷ್ಣ, ಸುಧೀರ್, ರಣವೀರ್ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net