ಸೆ.11ರಂದು ಮೈಸೂರು ಮ್ಯಾರಥಾನ್ ಸ್ಪರ್ಧೆ

ce7baad6-cd1a-48ff-8e65-4045021d7c5d
Published on

ಮೈಸೂರು: ಲೈಫ್ ಈಸ್ ಕಾಲಿಂಗ್ ಸಂಘಟನೆಯಿಂದ ಮೈಸೂರು ಮ್ಯಾರಥಾನ್ ಸ್ಪರ್ಧೆಯನ್ನು ಸೆಪ್ಟೆಂಬರ್ 11ರಂದು ಬೆಳಗ್ಗೆ 5.30ಕ್ಕೆ ನಗರದಲ್ಲಿ ಆಯೋಜಿಸಲಾಗಿದೆ.

ಅರಮನೆ ಬಲರಾಮ ದ್ವಾರದ ಬಳಿ ಓಟ ಆರಂಭವಾಗಲಿದೆ. 30 ಕಿಮೀ, 21 ಕಿಮೀ, 10 ಕಿಮೀಗಳ ಓಟದ ಸ್ಪರ್ಧೆ ನಡೆಯಲಿದೆ. 16 ವರ್ಷ ಮೇಲ್ಪಟ್ಟವರು ಪಾಲ್ಗೊಳ್ಳಬಹುದಾಗಿದೆ.

ಇನ್ನೂ 11 ವರ್ಷ ಮೇಲ್ಪಟ್ಟವರು 5 ಕಿಮೀ ನಡಿಗೆಯಲ್ಲಿ ಪಾಲ್ಗೊಳ್ಳಬಹುದು. ಮಾಹಿತಿಗಾಗಿ ಮೊ.9606622006 ಸಂಪರ್ಕಿಸಬಹುದು ಎಂದು ಕಾರ್ಯಕ್ರಮದ ನಿರ್ದೇಶಕ ಸುನಿಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net