ಸೂರ್ಲಬ್ಬಿಗೆ ಆನೆ ಕಂಟಕ

15SPT5
Published on

ಕೊಡಗು: ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಗ್ರಾಮವಾದ ಸೂರ್ಲಬ್ಬಿಯಲ್ಲಿ ಕಾಡಾನೆ ಹಾವಳಿಯಿಂದ ಕೃಷಿಕರು ಕಂಗಾಲಾಗಿದ್ದಾರೆ.

ಇಲ್ಲಿನ ಬಹುತೇಕ ಕೃಷಿಕರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಕಾಫಿ ಮತ್ತು ಕಾಳು ಮೆಣಸು ಬೆಳೆಗಳಿಗೆ ಮಳೆಯಿಂದ ಹಾನಿಯಾಗಿತ್ತು. ಕಳೆದೊಂದು ವರ್ಷದ ಹಿಂದೆ ಕಾಡು ಕೋಣಗಳ ಉಪಟಳದಿಂದ ಈ ಭಾಗದ ರೈತರು ಬೆಳೆ ನಷ್ಟ ಅನುಭವಿಸಿದ್ದರು. ಇದೀಗ ಕಾಡಾನೆಗಳ ದಾಳಿಯಿಂದ ಕಂಗಾಲಾಗಿದ್ದಾರೆ.

ಶುಕ್ರವಾರದಂದು ರಾತ್ರಿ ಸೂರ್ಲಬ್ಬಿ ಗ್ರಾಮದ ಓಡಿಯಂಡ ಲೋಕೇಶ್ ಧರ್ಮರಾಯ ಅವರ ತೋಟದಲ್ಲಿರುವ ಬಾಳೆ, ಅಡಕೆ, ಕಾಫಿ ಮತ್ತು ಏಲಕ್ಕಿ ಬೆಳೆಗಳನ್ನು ಸಂಪೂರ್ಣ ನಾಶ ಮಾಡಿವೆ.

ಈ ಭಾಗದ ಗ್ರಾಮಗಳಲ್ಲಿ ಅತಿ ಹೆಚ್ಚಿನ ಮನೆಗಳಲ್ಲಿ ವೃದ್ಧ ದಂಪತಿಗಳು ವಾಸವಾಗಿದ್ದಾರೆ. ಈಗ ತೋಟಕ್ಕೆ ತೆರಳಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರಿಗೆ ಪರಿಹಾರದೊಂದಿಗೆ ಕಾಡಾನೆ ಹಾವಳಿಗೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net