

ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿಯ ಗುರು ಇನ್‌ಸ್ಟಿಟ್ಯೂಟ್ ಹಾಗೂ ನಗರದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ವತಿಯಿಂದ ನಟ, ನಿರ್ದೇಶಕ ಡಾ. ಯಶವಂತ ಸರದೇಶಪಾಂಡೆ ನಿರ್ದೇಶನದ ‘ಸೂಪರ್ ಸಂಸಾರ’ ಹಾಸ್ಯ ನಾಟಕ ಪ್ರದರ್ಶನವನ್ನು ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಏರ್ಪಡಿಸಲಾಗಿದೆ.
ಜು. 29ರಂದು ಸಂಜೆ 6.30ಕ್ಕೆ ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್‌ನಲ್ಲಿ ಹಾಗೂ ಜು. 30ರಂದು ಸಂಜೆ 6.30ಕ್ಕೆ ಸೃಜನ ರಂಗ ಮಂದಿರದಲ್ಲಿ ಪ್ರದರ್ಶನ ನಡೆಯಲಿದೆ.
ರವಿ ಕುಲಕರ್ಣಿ, ಮಾಲತಿ ಸರದೇಶಪಾಂಡೆ, ಪೂಜಾಮಣಿ ಜಹಗೀರದಾರ, ಶಿಲ್ಪಾ ಪಾಂಡೆ, ಕಿಟ್ಟಿ ಗಾಂವ್ಕರ್, ಪ್ರದೀಪ ಮುಧೋಳ, ಯಶವಂತ ಸರದೇಶಪಾಂಡೆ ರಂಗದ ಮೇಲೆ ಕಾಣಸಿಕೊಳ್ಳಲಿದ್ದಾರೆ. ವಿನ್ಯಾಸ-ಸಂಗೀತ ನಿರ್ವಹಣೆ ಜೀವನ್ ಫರ್ನಾಂಡಿಸ್ ಮತ್ತು ಬೆಳಕಿನ ವಿನ್ಯಾಸವನ್ನು ನಾಗರಾಜ ಪಾಟೀಲ ನಿರ್ವಹಿಸಲಿದ್ದಾರೆ. ಮರಾಠಿಯ ಪ್ರಸಿದ್ಧ ನಾಟಕಕಾರ ಸಂತೋಷ ಪವಾರ ರಚಿಸಿದ ಈ ನಾಟಕವನ್ನು ಡಾ.ಯಶವಂತ ಸರದೇಶಪಾಂಡೆ ಅನುವಾದಿಸಿ, ನಿರ್ದೇಶಿಸಿದ್ದಾರೆ ಎಂದು ಆಯೋಜಕ ಮಾರ್ತಾಂಡಪ್ಪ ಕತ್ತಿ ತಿಳಿಸಿದ್ದಾರೆ.