

ಮೈಸೂರು: ಸರಳ ದಸರಾ ಎನ್ನುತ್ತಲೇ 15 ಕೋಟಿ ರೂ. ಅನ್ನು ದುಂದು ವೆಚ್ಚ ಮಾಡಲಾಗುತ್ತಿದೆ. ಕರೊನಾ ನೆರೆಯಿಂದ ಜನರು ತತ್ತರಿಸಿರುವಾಗ ಇಂತಹ ಸಂಭ್ರಮ ಬೇಕಿತ್ತಾ ಎಂದು ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ಅಧ್ಯಕ್ಷ ಬಿ.ಎಂ.ಶಿವಶಂಕರ್ ಟೀಕಿಸಿದ್ದಾರೆ.
ಕಳೆವ ವರ್ಷ ಲಕ್ಷಾಂತರ ಜನರು ಸೇರಿದ್ದಾಗಲೂ ಸರ್ಕಾರ 15 ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೆ ಈಗ ಕೇವಲ 300 ಜನ ಸೇರುವ ಈ ಬಾರಿಯ ದಸರಾಕ್ಕೂ ಕೋಟ್ಯಾಂತರ ರೂ. ಖರ್ಚು ಮಾಡಿ ದೀಪಾಲಂಕಾರ ಬೇಕಿತ್ತಾ. ಈ ಹಣವನ್ನು ಕೋವಿಡ್ ನಿಂದ ನೆರೆಯಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.