ಸೂಚ್ಯಂಕದಲ್ಲಿ ಮುಂಚೂಣಿಗೆ ತರಲು ಶ್ರಮಿಸಿ

ydg07
Published on

ಯಾದಗಿರಿ: ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಜಿ¯್ಲೆಗಳಲ್ಲಿ ಆಯ್ಕೆಯಾಗಿರುವ ಯಾದಗಿರಿ ಜಿ¯್ಲÉಯನ್ನು ಸಮಗ್ರ ಅಭಿವೃದ್ಧಿ ಸೂಚ್ಯಂಕದಲ್ಲಿ ಮುಂಚುಣಿಗೆ ಬರುವಂತೆ ಅಧಿಕಾರಿಗಳು ಶ್ರಮಿಸಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸೂಚನೆ ನೀಡಿದರು.

ವಡಗೇರಾ ತಾಲೂಕಿನ ತಡಿಬಿಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ಸಂಪೂರ್ಣ ಅಭಿಯಾನ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟçದ ೧೧೨ ಜಿ¯್ಲÉಗಳನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿ¯್ಲÉಗಳಲ್ಲಿ ಆಯ್ಕೆ ಮಾಡಿದ್ದು, ಅದರಲ್ಲಿ ಯಾದಗಿರಿ ಮತ್ತು ರಾಯಚೂರು ಕೂಡ ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ, ಶಿP್ಷÀಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ, ಕುಡಿಯುವ ನೀರು, ಕೃಷಿ ಇಲಾಖೆ ಸೂಚ್ಯಂಕದಲ್ಲಿ ಮುಂಚುಣಿಗೆ ತರಲು ಜಿಲ್ಲೆಯ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಇಲಾಖೆಗೆ ಅಗತ್ಯ ಅನುದಾನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ರೈತರ ಜೀವನ ಸುಧಾರಣೆಯಾಗಬೇಕು. ಆರ್ಥಿಕ ಅಭಿವೃದ್ಧಿಗೆ ನೆರವಾಗಬೇಕು. ಪ್ರತಿ ರೈತರಿಗಾಗಿ ಇರುವಂತಹ ಮಣ್ಣಿನ ಸತ್ವ ಪರೀಕ್ಷೆ, ಯೋಜನೆಗಳ ಲಾಭ ದೊರಕಿಸಿಕೊಡುವಂತೆ ಸೂಚಿಸಿದರು.

ಜಿ¯್ಲÁಧಿಕಾರಿ ಡಾ.ಸುಶೀಲಾ ಪ್ರಾಸ್ತಾವಿಕ ಮಾತನಾಡಿ, ೨೦೧೮ರಲ್ಲಿ ಕೇಂದ್ರ ಸರ್ಕಾರ ರಾಷ್ಟçದ ೧೧೨ ಜಿ¯್ಲÉಗಳನ್ನು ಸೂಚ್ಯಂಕ ಆಧಾರದಲ್ಲಿ ಮಹತ್ವಕಾಂಕ್ಷಿ ಜಿ¯್ಲÉಯಾಗಿ ಆಯ್ಕೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ವಡಗೇರಾ ಮಹತ್ವಾಕಾಂಕ್ಷಿ ಬ್ಲಾಕ್ ಎಂದು ಘೋಷಣೆ ಮಾಡಿದೆ. ಶೇ.೧೦೦ ಪ್ರಗತಿ ಸಾಧಿಸಲು ಉz್ದÉÃಶಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಶಾಸಕ ಶರಣಗೌಡ ಕಂದಕೂರ, ತಡಿಬಿಡಿ ಗ್ರಾಮ ಪಂಚಾಯಿತಿ ಅಧ್ಯP್ಷÀ ಉಮಾರೆಡ್ಡಿ, ಡಿಡಿಪಿಐ ಮಂಜುನಾಥ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಿತೇಂದ್ರನಾಥ ಸೂಗೂರ ಇತರರಿದ್ದರು. ಇದೇ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net