ಸೂಗೂರೇಶ್ವರ ರಥದ ಕಲಶ ಮೆರವಣಿಗೆ

02 Ark 02
Published on

ಅರಕೇರಾ: ಪಟ್ಟಣದ ಶ್ರೀ ಸೂಗೂರೇಶ್ವರ ರಥ ಲೋಕಾರ್ಪಣೆ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಸೋಮವಾರ ಅದ್ದೂರಿಯಾಗಿ ಜರುಗಿದವು.

ಮಹಿಳೆಯರು ಬೆಳಗ್ಗೆ ವಾದ್ಯ ಮೇಳದೊಂದಿಗೆ ಗಂಗಾ ಸ್ಥಳಕ್ಕೆ ತೆರಳಿ ಉದಕ ಪೂಜೆ ನೆರವೇರಿಸಿದರು. ರಥಕ್ಕೆ ಅಳವಡಿಸುವ ಸುಮಾರು ನಾಲ್ಕು ಫೀಟ್ ಎತ್ತರದ ಕಲಶವನ್ನು ಗಂಗಾ ಸ್ಥಳದಿಂದ ದೇವಸ್ಥಾನದವರೆಗೆ ಮೆರವಣಿಗೆ ಮಾಡಲಾಯಿತು. ಬಳಿಕ ವಡವು ವಚನ, ಮಂತ್ರಗಳನ್ನು ಪಠಿಸುವ ಮೂಲಕ ದೇವಸ್ಥಾನ ಪ್ರವೇಶಿಸಲಾಯಿತು. ನಂತರ ದೇವಸ್ಥಾನದಲ್ಲಿ ಗಣಪತಿ ಪೂಜೆ ನೆರವೇರಿಸಲಾಯಿತು.

ಸನಾತನ ಧರ್ಮ ಬಿಂಬಿಸುವ ಮಂಟಪವನ್ನು ರಥದ ಮುಂಭಾಗದಲ್ಲಿ ನಿರ್ಮಿಸಿ ಯಜ್ಞಯಾಗಾದಿಗಳನ್ನು ನೆರವೇರಿಸಲಾಯಿತು. ಶ್ರೀಶೈಲದ ವೀರಶೈವ ಗುರುಕುಲದ ಸಂಸ್ಥಾಪಕ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ ಶಿಷ್ಯ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net