ಸೂಕ್ತ ಸ್ಥಳದಲ್ಲಿ ಟ್ರಾನ್ಸಫಾರ್ಮರ್ ಅಳವಡಿಸಲು ಒತ್ತಾಯ

web4
ಅಕ್ಕತಂಗೇರಹಾಳ ಗ್ರಾಮದ ತಂಗುದಾಣ ಹತ್ತಿರದ ವಿದ್ಯುತ್ ಟಿಸಿ ತ್ವರಿತವಾಗಿ ಸ್ಥಳಾಂತರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಅಂಕಲಗಿ-ಅಕ್ಕತಂಗೇರಹಾಳ ಪಪಂ ಮುಖ್ಯಾಧಿಕಾರಿ ಬಸವರಾಜ ಮನಗೂಳಿಗೆ ಮನವಿ ಸಲ್ಲಿಸಿದರು. ವೀರನಗೌಡ ಈಶ್ವರಪ್ಪಗೋಳ, ರಮೇಶ ನಿರ್ವಾಣಿ, ಸೋಮಲಿಂಗ ಹೊಳೆಯಾಚಿ, ಶಂಕರ ತುಪ್ಪದ, ಶಿವನಪ್ಪ ಕುಂದರಗಿ, ಮಲ್ಲಿಕಾರ್ಜುನ ನಾಯಿಕ, ಮಲ್ಲಪ್ಪ ಹುಳ್ಯಾಗೋಳ ಇದ್ದರು.
Published on

ಅಂಕಲಗಿ: ಸಮೀಪದ ಅಕ್ಕತಂಗೇರಹಾಳ ಗ್ರಾಮದ ತಂಗುದಾಣ ಹತ್ತಿರದ ಟಿಸಿಯನ್ನು ತ್ವರಿತವಾಗಿ ಸ್ಥಳಾಂತರಿಸುವಂತೆ ಒತ್ತಾಯಿಸಿ ಅಕ್ಕತಂಗೇರಹಾಳ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಮಂಗಳವಾರ ಅಂಕಲಗಿ-ಅಕ್ಕತಂಗೇರಹಾಳ ಪಪಂ ಮುಖ್ಯಾಧಿಕಾರಿ ಬಸವರಾಜ ಮನಗೂಳಿಗೆ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಚರಂಡಿ ಅಸ್ವಚ್ಛತೆ, ಕಸ ನಿರ್ವಹಣೆ, ವಿದ್ಯುತ್ ದೀಪಗಳ ಸಮಸ್ಯೆಗಳಿವೆ. ವರ್ತುಳ ರಸ್ತೆಗಳಿಗೆ ಡಾಂಬರ್ ಹಾಕಬೇಕು ಎಂದು ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಪಪಂ ಮುಖ್ಯಾಧಿಕಾರಿ ಬಸವರಾಜ ಮನಗೂಳಿ, ಸದ್ಯದಲ್ಲಿ ಟಿಸಿ ಸ್ಥಳಾಂತರಿಸಲಾಗುವುದು. ಪಂಜಾನಟ್ಟಿ ಗ್ರಾಮದ ಬಾವಿ ಕುಸಿದು ಕುಡಿಯುವ ನೀರಿಗೆ ತೊಂದರೆಯಾಗಿದೆ. ಟ್ರ್ಯಾಕ್ಟರ್ ಮೂಲಕ ನೀರಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ವೀರನಗೌಡ ಈಶ್ವರಪ್ಪಗೋಳ, ರಮೇಶ ನಿರ್ವಾಣಿ, ಸೋಮಲಿಂಗ ಹೊಳೆಯಾಚಿ, ಶಂಕರ ತುಪ್ಪದ, ಶಿವನಪ್ಪ ಕುಂದರಗಿ, ಮಲ್ಲಿಕಾರ್ಜುನ ನಾಯಿಕ, ಮಲ್ಲಪ್ಪ ಹುಳ್ಯಾಗೋಳ, ಸುನಿಲ ಹಿರೇಮಠ, ಅಡಿವೆಪ್ಪ ಈಶ್ವರಪ್ಪಗೋಳ, ಶ್ರೀಕಾಂತ ತಡಕೋಡ, ಅಡಿವೆಪ್ಪ ಶೆಟ್ಟೆಣ್ಣವರ, ಪ್ರಜ್ವಲ ಪಾಟೀಲ, ಅಡಿವೆಪ್ಪ ಪಾಟೀಲ, ಬಸು ತಡಕೋಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net