ಸುಸ್ಥಿರ ಕೃಷಿ ತರಬೇತಿ ಕಾರ್ಯಾಗಾರ

Published on

ಹನೂರು: ಕೊಳ್ಳೇಗಾಲದ ಜೆಎಸ್‌ಬಿ ಪ್ರತಿಷ್ಠಾನದ ವತಿಯಿಂದ ಜೂ.8ರಂದು ಕಾಮಗೆರೆ ಗ್ರಾಮದ ಮೈರಾಡ ತರಬೇತಿ ಸಂಸ್ಥೆಯಲ್ಲಿ ಬೆಳಗ್ಗೆ 10 ಗಂಟೆಗೆ ಸುಸ್ಥಿರ ಕೃಷಿ ತರಬೇತಿ ಕಾರ್ಯಾಗಾರ’ ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಇನ್ಫೋ ವಾಹಿನಿ ಮಾರ್ಗದರ್ಶಕ ಮತ್ತು ಕೃಷಿಕ ಎಚ್.ಆರ್.ಮಂಜುನಾಥ್, ಸತ್ತೇಗಾಲದ ಕೃಷಿಕ ಪ್ರಶಾಂತ್ ಜಯರಾಮ್ ಪಾಲ್ಗೊಳ್ಳುವರು. ತರಬೇತಿಯಲ್ಲಿ ಭಾಗವಹಿಸಲು 40 ರೈತರಿಗೆ ಮಾತ್ರ ಅವಕಾಶವಿದೆ. ಆಸಕ್ತ ರೈತರು ಜೂ.07 ರೊಳಗಾಗಿ ಮೊ: 9880949689 ಗೆ ಸಂಪರ್ಕಿಸಿ, ಕಡ್ಡಾಯವಾಗಿ ನೋಂದಾಯಿಕೊಳ್ಳಬೇಕೆಂದು ಪ್ರತಿಷ್ಠಾನದ ಶಶಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net