

ಬಾಗಲಕೋಟೆ: ನವನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಜಿಲ್ಲಾ ಲಸಿಕಾ ಉಗ್ರಾಣ ಕಟ್ಟಡವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಲೋಕಾರ್ಪಣೆಗೊಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿAಗ್ ಘಟಕದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡ ಲಸಿಕಾ ಉಗ್ರಾಣ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದ ಅವರು, ೮೬.೬೮ ಲಕ್ಷ ರೂ.ಗಳ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಇದರಲ್ಲಿ ವ್ಯಾಕ್ಸಿನ್ ಉಗ್ರಾಣ ಕೋಣೆ, ಕೋಲ್ಡಚೈನ್, ಪ್ಯಾಕಿಂಗ್, ಆಫೀಸ್, ಕಂಪ್ಯೂಟರ ಕೋಣೆ ಒಳಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತç ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಮಾತನಾಡಿ, ಬಾಗಲಕೋಟೆ, ವಿಜಯಪುರ ಹಾಗೂ ಗದಗ ಜಿಲ್ಲೆ ಸೇರಿ ಬಾಗಲಕೋಟೆಯಲ್ಲಿ ಸ್ಕೀಲ್ ಲ್ಯಾನ್ ತರಬೇತಿ ಕೇಂದ್ರವಿದ್ದು, ಈ ತರಬೇತಿ ಕೇಂದ್ರಕ್ಕೆ ತರಬೇತಿ ಪಡೆಯುವ ಪಿ.ಎಚ್.ಸಿ, ಸಿಎಚ್‌ಸಿ ಹಾಗೂ ಜಿಲ್ಲಾ ಆಸ್ಪತ್ರೆಯ ವೈದ್ಯಾಽಕಾರಿಗಳು ಹಾಗೂ ಸ್ಟಾಪ್ ನರ್ಸಗಳು ತರಬೇತಿ ಪಡೆಯುವವರು ಬಹಳಷ್ಟು ಇದ್ದು, ತರಬೇತಿ ಅನುಮತಿ ದೊರೆಯುತ್ತಿಲ್ಲ. ಈ ತರಬೇತಿಯಿಂದ ಹೆರಿಗೆ ಸಮಯದಲ್ಲಿ ತಾಯಿ ಮರಣ ತಡೆಯಲು ಅನುಕೂಲವಾಗುತ್ತಿದ್ದು, ತರಬೇತಿಗೆ ಅನುಮತಿ ದೊರೆಯುತ್ತಿಲ್ಲ ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು. ಮೇಲಾಽಕಾರಿಗಳಿಗೆ ಕರೆ ಮಾಡಿ ತರಬೇತಿಗೆ ಅನುಮತಿ ನೀಡುವಂತೆ ಸಚಿವರ ದಿನೇಶ ಗುಂಡೂರಾವ ಸೂಚಿಸಿದರು.
ಜಿಲ್ಲಾ ಆಸ್ಪತ್ರೆ ೨೫ ವರ್ಷಗಳ ಹಳೆಯ ಕಟ್ಟಡವಾಗಿದ್ದು, ದುರಸ್ಥಿ ಹಾಗೂ ಎಸ್‌ಟಿಪಿ ಸಲುವಾಗಿ ೯.೫೦ ಕೋಟಿ ರೂ. ಅನುದಾನ ಬಿಡುಗಡೆಯಾಗಿ ಟೆಂಡರ ಪ್ರಕ್ರಿಯೆ ಆಗಿದೆ. ಆದರೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದಲ್ಲಿ ಜಿಲ್ಲಾ ಆಸ್ಪತ್ರೆಗೆ ಕಾಯ್ದಿರಿಸಿದ ಅನುದಾನ ೯ ಕೋಟಿ ರೂ.ಗಳಲ್ಲಿ ದುರಸ್ಥಿ ಮಾಡಿಕೊಳ್ಳುವಂತೆ ಸದರಿ ಅನುದಾನ ಬಿಡುಗಡೆಗೆ ತಡೆ ನೀಡಿದ್ದಾರೆ. ಬಿಟಿಡಿಎ ಅನುದಾನದಲ್ಲಿ ಪ್ರತ್ಯೇಕ ಒಪಿಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಸ್ಥಗಿತಗೊಂಡ ಅನುದಾನ ಬಿಡುಗಡೆಗೆ ಅನುಮೋದನೆ ನೀಡುವಂತೆ ಸಚಿವರಲ್ಲಿ ಜಿಲ್ಲಾ ಶಸ್ತç ಚಿಕಿತ್ಸಕರು ಕೇಳಿಕೊಂಡರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ ಗುಂಡೂರಾವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ, ಜಿಲ್ಲಾಽಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽಕಾರಿ ಡಾ.ಮಂಜುನಾಥ ಡಿ, ಜಿಲ್ಲಾ ಕುಟುಂಬ ಕಲ್ಯಾಣಾಽಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಽಕಾರಿ ಡಾ.ಕುಸುಮಾ ಮಾಗಿ, ಜಿಲ್ಲಾ ಸಮೀಕ್ಷಣಾಽಕಾರಿ ದಯಾನಂದ ಕರೇನ್ನವರ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಽಕಾರಿ ಸುವರ್ಣ ಕುಲಕರ್ಣಿ, ಕುಷ್ಟರೋಗ ನಿಯಂತ್ರಣಾಽಕಾರಿ ಡಾ.ಶಿವನಗೌಡರ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.