ಸುವರ್ಣ ಸೌಧ ಮುತ್ತಿಗೆ 18ರಂದು

A B HOSAMANI
Published on

ಕಲಬುರಗಿ: ಬಡವರ ಬಿಪಿಎಲ್ ಕಾರ್ಡ್ ರದ್ದತಿ ವಿರೋಧಿಸಿ, ದುರುಪಯೋಗ ಪಡೆಸಿಕೊಂಡ ಎಸ್‌ಸಿಪಿ/ಟಿಎಸ್‌ಪಿ ಹಣ ವಾಪಸ್ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಿಪಬ್ಲಿಕನ್ ಪಾರ್ಟಿ ಆï ಇಂಡಿಯಾ ಮತ್ತು ಜನಪರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಡಿ.೧೮ರಂದು ಬೆಳಗಾವಿ ಸುವರ್ಣಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಂದು ಆರ್‌ಪಿಐ ರಾಷ್ಟಿçÃಯ ಕಾರ್ಯಕಾರಿಣಿ ಸದಸ್ಯ ಎ.ಬಿ.ಹೊಸಮನಿ ತಿಳಿಸಿದರು.

ಎಸ್‌ಸಿಪಿ/ಟಿಎಸ್‌ಪಿಯ ಸುಮಾರು ೨೩ ಸಾವಿರ ಕೋಟಿ ರೂ. ಬೇರೆ ಬೇರೆ ಯೋಜನೆಗೆ ಬಳಸಲಾಗಿದೆ. ಅದನ್ನು ಕೂಡಲೇ ವಾಪಸ್ ಪಡೆಯಬೇಕು. ಬಿಪಿಎಲ್ ಕಾರ್ಡ್ಗಾಗಿ ಬಡವರ ಆದಾಯ ೩ ಲಕ್ಷಕ್ಕೆ ಏರಿಕೆ ಮಾಡಬೇಕು ಎಂಬುದು ಸೇರಿ ನಾನಾ ಬೇಡಿಕೆ ಈಡೇರಿಕೆ ಆಗ್ರಹಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

. ಗ್ರಾಮ ಪಂಚಾಯಿತಿ ಸಹಾಯಕರನ್ನು ಕಾಯಂಗೊಳಿಸಬೇಕು. ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಬೇಕು, ವಿವಿಧ ನಿಗಮಗಳಲ್ಲಿ ನಡೆದ ಅಕ್ರಮದ ಹೊಣೆ ಸಿಎಂ ಹೊರಬೇಕು, ಆಯಾ ನಿಗಮಕ್ಕೆ ಹಣ ವಾಪಸ್ ನೀಡಬೇಕು ಎಂದು ಆಗ್ರಹಿಸಲಾಗುವುದು. ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ, ಆರ್‌ಪಿಐ ರಾಷ್ಟಿçÃಯ ಕಾರ್ಯಾಧ್ಯP್ಷÀ ಎಂ.ವೆAಕಟಸ್ವಾಮಿ, ರಾಜ್ಯಾಧ್ಯಕ್ಷ ಸತೀಶ, ರಾಜ್ಯ ಕಾರ್ಯಾಧ್ಯP್ಷÀ ಜಿ.ಗೋವಿಂದಯ್ಯ ಸೇರಿ ಹಲವು ಭಾಗವಹಿಸಲಿದ್ದಾರೆ ಎಂದರು. ರಾಜಕುಮಾರ ನಡಗೇರಿ, ವಿಠ್ಠಲ ಬಾಚನಾಳ, ಭೀಮಾಶಂಕರ ಕಟ್ಟಿಸಂಗಾವಿ, ಮಲ್ಲಿಕಾರ್ಜುನ ಪೇಠಶಿರೂರ, ಶಂಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net