

ವಿಜಯಪುರ: ಭಾರತ ಪಾಕಿಸ್ತಾನ ಮದ್ಯೆ ನಡೆದಿದ್ದ 1971ಯುದ್ಧದ ಸುವರ್ಣ ವಿಜಯ ವರ್ಷ ಕಾರ್ಯಕ್ರಮವನ್ನು ವಿಜಯಪುರದಲ್ಲಿ ಆಚರಿಸಲಾಯಿತು. ವಿಜಯವಾಣಿ ದಿಗ್ವಿಜಯ ನ್ಯೂಸ್ ಹಾಗೂ ವಿಜಯಪುರ ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಘದಿಂದ ಮತ್ತು 36 ಎನ್ ಸಿಸಿ ಬಟಾಲಿಯನ್ ನಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜಯಪುರ ನಗರದ ಸೈನಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಸುವರ್ಣ ವಿಜಯ ವರ್ಷ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು, ಎನ್ ಸಿ ಸಿ ಬಟಾಲಿಯನ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ರು. 36 ಎನ್ ಸಿ ಸಿ ಬಟಾಲಿಯನ್ ಕರ್ನಲ್ ರಸಪಾಲ್ ಸಿಂಗ್ ಅವರು ಹುತಾತ್ಮರ ಸ್ಮಾರಕಕ್ಕೆ ಶ್ರದ್ಧಾಂಜಲಿ ಅರ್ಪಿಸಿದ್ರು. ಭಾರತ ಪಾಕಿಸ್ತಾನ ಮದ್ಯೆ ಯುದ್ಧ ನಡೆದು ಇಂದಿಗೆ 50 ವರ್ಷಗಳು ಆದ ಕಾರಣ ಈ ದಿನವನ್ನು ಗೋಲ್ಡನ್ ಜುಬ್ಲಿ ಇಯರ್ ಎಂದು ಇಡಿ ದೇಶವೇ ಆಚರಿಸುತ್ತಿದೆ. ದೇಶದ ವೀರ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ನಿಮ್ಮ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಕೂಡ ಹಮ್ಮಿಕೊಂಡಿತ್ತು.