ಸುಳ್ಳುಗಳಿಂದಲೇ ತುಂಬಿರುವ ‘ಟಿಪ್ಪುವಿನ ನಿಜ ಕನಸುಗಳು’ : ಮೈಸೂರು ಯುವ ವೇದಿಕೆ ಆಕ್ರೋಶ

mysore youths
Published on

ಮೈಸೂರು: ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ರಚನೆ ಮಾಡಿರುವ ‘ಟಿಪ್ಪುವಿನ ನಿಜ ಕನಸುಗಳು’ ನಾಟಕದಲ್ಲಿ ಸುಳ್ಳುಗಳೇ ತುಂಬಿಕೊಂಡಿದ್ದು, ನಾಟಕ ಪ್ರದರ್ಶನ ಮಾಡಿದರೆ ರಂಗಾಯಣದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮೈಸೂರು ಯುವ ವೇದಿಕೆ ಸದಸ್ಯ ರಫೀಕ್ ಅಲಿ ಎಚ್ಚರಿಸಿದರು.

‘ಟಿಪ್ಪುವಿನ ನಿಜಕನಸುಗಳು’ ನಾಟಕ ಕೃತಿಯನ್ನು ನಾನು ಓದಿದ್ದೇನೆ. ಅದರಲ್ಲಿ ಟಿಪ್ಪು ಮತಾಂಧ, ಹಿಂದು ವಿರೋಧಿ ಎಂದು ಬಿಂಬಿಸಲಾಗಿದೆ. ಆದರೆ, ಟಿಪ್ಪು ದೇವಾಲಯಗಳಿಗೆ ನೀಡಿದ ಕೊಡುಗೆಗಳು, ದಲಿತರಿಗೆ ಭೂಮಿ ಕೊಡಿಸಿದ್ದು, ಹಿಂದು ದೇವಾಲಯ ರಕ್ಷಣೆ ಮಾಡಿದ ವಿಚಾರಗಳನ್ನು ಪ್ರಸ್ತಾಪಿಸಿಲ್ಲ. ‘ಮತಾಂಧನಾಗಬೇಡ’ ಎಂದು ಪತ್ನಿ ಹಾಗೂ ತಾಯಿ ಟಿಪ್ಪುವಿಗೆ ಸಲಹೆ ನೀಡಿರುವ ಅಂಶವನ್ನು ಕಾರ್ಯಪ್ಪ ಉಲ್ಲೇಖಿಸಿದ್ದಾರೆ. ಟಿಪ್ಪುಗೆ ಪತ್ನಿ ಮತ್ತು ತಾಯಿ ಸಲಹೆ ನೀಡುವಾಗ ಕಾರ್ಯಪ್ಪ ಪಕ್ಕದಲ್ಲಿ ಇದ್ದರೇ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಹಿಂದು-ಮುಸ್ಲಿಮರ ನಡುವೆ ಒಡಕು ಮೂಡಿಸುವ ಸಲುವಾಗಿ ಈ ಕೃತಿ ರಚಿಸಿದ್ದಾರೆ. ನಗರದ ಶಾಂತಿಯನ್ನು ಕೆಡಿಸುವ ಹುನ್ನಾರವನ್ನು ಕಾರ್ಯಪ್ಪ ಹೊಂದಿದ್ದಾರೆ. ಧ್ವೇಷ ಹಾಗೂ ತಪ್ಪು ಮಾಹಿತಿಗಳಿಗೆ ಕೂಡಿರುವ ‘ಟಿಪ್ಪುವಿನ ನಿಜ ಕನಸುಗಳು’ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಇನಾಯತ್ ಖಾನ್, ಸೈಯ್ಯದ್ ರಿಜ್ವಾನ್, ಮೊಹಮ್ಮದ್ ಅಬ್ರಾರ್, ರಜತ್, ಮಣಿಕಂಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net