ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ

6-4 ctpr ..2
Published on

ಕಾಳಗಿ: ಕರೊನಾ ಸೋಂಕಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದು, ಇವುಗಳಿಗೆ ಕಿವಿಗೊಡಬೇಡಿ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಸವರಾಜ ಚಿತ್ತಕೋಟಿ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕರೊನಾ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲರೂ ಜಾಗೃತರಾಗಿರಬೇಕು. ಮನೆಯಲ್ಲಿದ್ದು, ಸೋಂಕಿನ ವಿರುದ್ಧ ಹೋರಾಟ ನಡೆಸಬೇಕಿದೆ. ಹೊರಗಡೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ಕರೆ ನೀಡಿದರು.
ಸಿಪಿಐ ಭೋಜರಾಜ ರಾಠೋಡ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶಿವಶರಣಪ್ಪ ಗುತ್ತೇದಾರ್, ಗುಡುಸಾಬ್ ಮಾಸ್ಟರ್ ಕಮಲಾಪುರ, ರಾಘವೇಂದ್ರ ಗುತ್ತೇದಾರ್, ಸಂತೋಷ ಪಾಟೀಲ್ ಮಂಗಲಗಿ, ಜಿಯಾವುದ್ದಿನ್ ಸೌದಾಗರ ಮಾತನಾಡಿದರು.ಪ್ರಮುಖರಾದ ಚಂದ್ರಕಾಂತ ಜಾಧವ್, ಶಿವಶರಣಪ್ಪ ಕಮಲಾಪುರ, ಪ್ರಶಾಂತ ಕದಂ, ಹಣಮಂತ ಒಡೆಯರಾಜ, ಮೆಹಬೂಬ್ ಬೇಗ್ ಬಿಜಾಪುರ, ಇಬ್ರಾಹಿಂ ಪಾಶಾ ಗಿರಣಿಕರ್, ಸಿದ್ದು ಮಾನಕರ್, ಶರಣು ಚಂದಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net