ಸುಳ್ಳು ಸುದ್ದಿ ಹರಡಿಸಿದರೆ ಕಠಿಣ ಕ್ರಮ

Dr. Sushila Yadagiri Dc
Published on

ಯಾದಗಿರಿ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ಭೀತಿ ಉಂಟಾಗಿರುವ ಹಿನ್ನಲೆಯಲ್ಲಿ ಜನರು ಸುಳ್ಳು ಸುದ್ದಿಗಳಿಗೆ ಕಿವಿಕೊಡಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೂಚನೆಯಂತೆ ಮೇರೆಗೆ ಜಿಲ್ಲಾಡಳಿತ ಅಥವಾ ಸರ್ಕಾರದಿಂದ ನೀಡುವ ಅಧಿಕೃತ ಮಾಹಿತಿ ಅನುಸರಿಸಿರಿ ಎಂದು ಜಿ¯್ಲÁಧಿಕಾರಿ ಡಾ.ಬಿ.ಸುಶೀಲಾ ತಿಳಿಸಿದ್ದಾರೆ.

ಜಿ¯್ಲÁಡಳಿತ ನೀಡುವ ಅಧಿಕೃತವಾಗಿ ಮಾಹಿತಿ ಜನರು ನಂಬಬೇಕು. ಉಳಿದವನ್ನು ನಂಬಬೇಡಿ. ಸಾರ್ವಜನಿಕರಿಗೆ ಬೇಕಾಗುವ ಅಗತ್ಯ ವಸ್ತಗಳ ಬೆಲೆ ಅನಗತ್ಯವಾಗಿ ಹೆಚ್ಚಳ ಮಾಡುವ ಪ್ರಯತ್ನಗಳು ಮಾಡಿದ್ದಲ್ಲಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಸಾರ್ವಜನಿಕರು ಅನಾವಶ್ಯಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡಬಾರದು. ಒಂದು ವೇಳೆ ಇಂತಹ ಕೆಲಸ ಮಾಡಿದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರಾಗಲಿ, ಸಂಘ-ಸAಸ್ಥೆಗಳಾಗಲಿ ದುರುಪಯೋಗ ಮಾಡಿಕೊಂಡು ಅನಾವಶ್ಯಕವಾಗಿ ಸಾರ್ವಜನಿಕರಿಗೆ ಬೇಕಾಗುವ ವಸ್ತುಗಳ ಬೆಲೆ ಹೆಚ್ಚಿಸಬಾರದು. ನಾಗರಿಕರ ರP್ಷÀಣೆ ಭಾಗವಾಗಿ ಸಾರ್ವಜನಿಕರು ದೊಡ್ಡ ಪ್ರಮಾಣದ ಸಮಾರಂಭ ಮಾಡುವುದಾಗಲಿ, ಸಾರ್ವಜನಿಕ ಸ್ಥಳಗಳಿಗೆ ಹೋಗಬಾರದು. ಜನರಿಗೆ ತೊಂದರೆಯಾದಲ್ಲಿ ತುರ್ತು ಸಹಾಯವಾಣಿ ಸಂಖ್ಯೆ ೦೮೪೭೩-೨೫೩೯೫೦ಗೆ ಸಂಪರ್ಕಿಸುವAತೆ ಡಿಸಿ ತಿಳಿಸಿz್ದÁರೆ.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net