ಬಳ್ಳಾರಿ : ನಟ ದರ್ಶನ್ ಗೆ ಯಾವುದೇ ಆರೋಗ್ಯ ಸಮಸ್ಯೆಯಿಲ್ಲ ಎಂದು ಎಸ್ಪಿ. ಡಾ.ವಿ.ಜೆ. ಶೋಭಾರಾಣಿ ಹೇಳಿದರು.
ಕೇಂದ್ರ ಕಾರಾಗೃಹಕ್ಕೆ ಬುಧವಾರ ಸಂಜೆ ಬೇಟಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜೈಲಿನಲ್ಲಿ ದರ್ಶನ್ ಆರೋಗ್ಯವಾಗಿದ್ದು, ಯಾವುದೇ ಸುಳ್ಳು ಸುದ್ದಿ ಹರಡಬೇಡಿ ಎಂದು ಮನವಿ ಮಾಡಿದರು. ಸಂಜೆ ವೇಳೆ ಎರಡನೇ ಬಾರಿ ಸಾಮಾನ್ಯವಾಗಿ ವೈದ್ಯರು ಆರೋಗ್ಯ ತಪಾಸಣೆ ಮಾಡಲಾಗಿದೆ. ಜೈಲು ಪ್ರವೇಶಿಸಿದ ವೇಳೆ ಕೈಯಲ್ಲಿದ್ದ ಖಡ್ಗ, ದಾರ, ಚೈನ್ ಗಳನ್ನು ತೆಗೆಸಿಲಾಗಿದೆ. ಟೀ ಶರ್ಟ್ ಮೇಲಿದ್ದ ಕೂಲಿಂಗ್ ಗ್ಲಾಸ್, ಪಾಯಿಂಟೆಡ್ ಗ್ಲಾಸ್ ಅಂತಾ ಹೇಳಲಾಗುತ್ತಿದೆ. ಅದರ, ಬಗ್ಗೆ ಪರಿಶೀಲಿಸಲಾಗುತ್ತಿದೆ. ಅವರ ಕೈಗೆ ಕೋಳ ಹಾಕಿಲ್ಲ, ಕೈಯಿಗೆ ನೋವುಗಿದ್ದರಿಂದ ಬಟ್ಟೆ ಸುತ್ತಿಕೊಂಡಿದ್ದರು ಎಂದು ಸ್ಪಷ್ಟನೆ ನೀಡಿದರು. ದರ್ಶನ್ ಜೈಲಿನ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಕುಟುಂಬಸ್ಥರ ಬೇಟಿಗೆ ಅವಕಾಶವಿದ್ದು. ಆದರೆ, ಯಾರು ಭೇಟಿ ನೀಡುತ್ತಾರೆ ಎನ್ನುವುದು ಮಾಹಿತಿಯಿಲ್ಲ. ವಿಚಾರಣಾಧಿನ ಕೈದಿ ಬ್ಯಾಂಡಡ್ ಬಟ್ಟೆ ಹಾಕಬಹುದು. ಆದರೆ, ಶಿಕ್ಷೆಗೆ ಗುರಿಯಾದ ಅಪರಾಧಿ ಹಾಕುವಂತಿಲ್ಲ ಎಂದು ಹೇಳಿದರು.
ಬಾಕ್ಸ್ : ನಗರದ ಕೇಂದ್ರ ಕಾರಾಗೃಹಕ್ಕೆ ದರ್ಶನ್ ಸ್ಥಳಾಂತರ ಅದ ಬಳಿಕ ಬೆಳ್ಳಗೆ ಟಿಫಿನ್ ಸೇವನೆಗೆ ನಿರಾಕರಿಸಿದರು. ಸತತ ಪ್ರಯಾಣದಿಂದ ಸುಸ್ತಾಗಿದ್ದ ದರ್ಶನ್ ವಿಶ್ರಾಂತಿ ಬಳಿಕ ಮಧ್ಯಾಹ್ನ ರಾಗಿ ಮುದ್ದೆ, ಅನ್ನ ಸಾಂಬಾರು ಸೇವಿಸಿದ್ದಾರೆ. ಸಂಜೆ ವೇಳೆ ಜೈಲಿಗೆ ಭೇಟಿ ನೀಡಿದ ವೈದ್ಯರು ಮತ್ತೆ ಆರೋಗ್ಯ ಬಗ್ಗೆ ಪರಿಶೀಲಿಸಿದರು. ದರ್ಶನ್ ಜತೆ ಯಾವುದೇ ಕೈದಿಗಳು ಹಾಗೂ ಪೊಲೀಸ ಅಧಿಕಾರಿಗಳು ಮಾತನಾಡದಂತೆ ಮೇಲಾ ಅಧಿಕಾರಿಗಳು ಸೂಚಿಸಿದ್ದಾರೆ. ಪ್ರತ್ಯೇಕ
ಸೆಲ್ ನಲ್ಲಿ ಸಿಸಿ ಟಿವಿ ಕಣ್ಗಾನಲ್ಲಿದ್ದಾರೆ ಎಂದು ಪೊಲೀಸರೊಬ್ಬರು ತಿಳಿಸಿದರು.
==={===