

ಕಲಬುರಗಿ: ಸುಳ್ಳು ಅಟ್ರಾಸಿಟಿ ಪ್ರಕರಣ ಕೋರ್ಟ್ನಲ್ಲಿ ಸಾಕ್ಷಿ ಇಲ್ಲದೆ ಮುಗಿಯುವ ಹಂತದಲ್ಲಿರುವಾಗ, ಹಣ ನೀಡಿ ಹೊಂದಾಣಿಕೆ ಮಾಡಿಕೊ ಎಂಬ ಒತ್ತಡಕ್ಕೆ ಒಪ್ಪದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಓಂ ನಗರದಲ್ಲಿ ಡಿ.೨೧ರಂದು ನಡೆದಿದೆ. ಲಾರಿ ಚಾಲಕ ಚಿತ್ರಶೇಖರ ಶೆಟ್ಟಿ ಹಲ್ಲೆಗೆ ಒಳಗಾದ ವ್ಯಕ್ತಿ.
ಘಟನೆ ವಿವರ: ಮೂರು ವರ್ಷದ ಹಿಂದೆ ಅಟ್ರಾಸಿಟಿ ಪ್ರಕರಣ ಆಳಂದ ಠಾಣೆಯಲ್ಲಿ ದಾಖಲಾಗಿದ್ದು, ಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿದೆ. ಸಾಕ್ಷಿ ಇಲ್ಲದ್ದಕ್ಕೆ ಪ್ರಕರಣ ಮುಗಿಯುವ ಹಂತದಲ್ಲಿದೆ. ಡಿ.೨೦ರಂದು ಜಿಲ್ಲಾ ಕೋರ್ಟ್ಗೆ ಪೇಸಿಗೆ ಹೋಗಿದ್ದಾಗ ಯಲ್ಲಾಲಿಂಗ, ಆತನ ಅಳಿಯ ನಾಗೇಶ, ಪತ್ನಿ ಶ್ರೀದೇವಿ, ಭೂಕಾಂತವ್ವ ಅವರು ರಾಜಿ ಮಾಡಿಕೊಳ್ಳೋಣ ೨ ಲಕ್ಷ ರೂ. ಹಣ ನೀಡು ಎಂದು ಪೀಡಿಸಿ, ಕೊನೆಗೆ ಒಂದು ಲಕ್ಷ ರೂ. ಕೇಳಿದ್ದಾರೆ. ರಾಜಿ ಆಗದಿದ್ದರೆ ಮತ್ತೆ ಅಟ್ರಾಸಿಟಿ ಕೇಸ್ ಮಾಡಿಸಿ, ಜೈಲಿಗೆ ಕಳಿಸಿ ನಾಲ್ಕು ಹಣ ಸರ್ಕಾರದಿಂದ ತೆಗೆದುಕೊಳ್ಳುತ್ತೇವೆ ಎಂದು ಹೆದರಿಸಿದ್ದಾರೆ.
ಈ ಮಧ್ಯೆ ಡಿ.೨೧ರಂದು ರಾತ್ರಿ ಲಾರಿ ಚಾಲನೆ ಕೆಲಸ ಮುಗಿಸಿ ಓಂ ನಗರದ ಗೇಟ್‌ನಿಂದ ನಡೆದುಕೊಂಡು ಹೋಗುತ್ತಿರುವಾಗ ಯ¯್ಲÁಲಿಂಗ ಹೊಸಮನಿ, ನಾಗೇಶ ಮಾಡ್ಯಾಳ ಇಬ್ಬರೂ ಕೂಡಿ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿದ್ದಾರೆ. ಲಕ್ಷ ರೂ. ನೀಡಿ ರಾಜಿ ಆಗದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಚಿತ್ರಶೇಖರ ಶೆಟ್ಟಿ ದೂರು ನೀಡಿದ್ದು, ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.