ಸುಳ್ಳಿನ ಮೂಟೆ ಹೊತ್ತು ಓಡಾಡಿಲ್ಲ

28BTP01
ಬೆಟ್ಟದಪುರ ಸಮೀಪದ ಮರದೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಭೂಮಿ ನೆರವೇರಿಸಿದರು. ಅಣ್ಣಯ್ಯಶೆಟ್ಟಿ, ರಂಗಸ್ವಾಮಿ, ಮಲ್ಲಿಕಾರ್ಜುನ್, ಬಿ.ಜೆ ದೇವರಾಜು, ನಟೇಶ್, ಮಲ್ಲಿಕಾರ್ಜುನ್ ಇದ್ದರು.
Published on

ಬೆಟ್ಟದಪುರ: ಶಾಸಕನಾಗಿ ಆಯ್ಕೆಗೊಂಡಾಗಿನಿಂದ ಜನರ ಸೇವೆಗಾಗಿ ಮೀಸಲಿದ್ದೇನೇ ಹೊರತು, ಸುಳ್ಳಿನ ಮೂಟೆ ಹೊತ್ತುಕೊಂಡು ಓಡಾಡುತ್ತಿಲ್ಲ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಬೆಟ್ಟದಪುರ ಸಮೀಪದ ತಂದ್ರೆಗುಡಿ ಕೊಪ್ಪಲು ಗ್ರಾಮದಲ್ಲಿ ಭಾನುವಾರ ಸಂಜೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕರು, ತಾಲೂಕಿನಲ್ಲಿ ಅಪ್ಪ, ಮಕ್ಕಳು ಸುಳ್ಳಿನ ಮೂಟೆ ಕಟ್ಟಿಕೊಂಡು ಗ್ರಾಮಗಳಲ್ಲಿ ಓಡಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಶಾಸಕರಾಗಿ 30 ವರ್ಷಗಳಿಂದ ತಾಲೂಕಿನ ಜನತೆಗೆ ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿ, ಕೆಲಸ ಮಾಡದೆ ಹಾಗೆ ಬಿಟ್ಟಿದ್ದಾರೆ. ನಿಜವಾಗಿ ಸುಳ್ಳು ಹೇಳಿಕೊಂಡು ಓಡಾಡಿದವರು ಅವರು. ನನ್ನ ಅವಧಿಯಲ್ಲಿ ಭೂಮಿಪೂಜೆ ಮಾಡಿ ಕೆಲಸ ಪೂರ್ಣಗೊಳ್ಳದೆ ಯಾವುದಾದರೂ ಕಾಮಗಾರಿಗಳು ಬಾಕಿ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರಂಗಸ್ವಾಮಿ, ಮಲ್ಲಿಕಾರ್ಜುನ್, ರೈತ ಮುಖಂಡ ಬಿ.ಜೆ. ದೇವರಾಜು, ಮುಖಂಡರಾದ ಕುಮಾರ್, ಲಕ್ಷ್ಮಣೇಗೌಡ, ಪುಟ್ಟರಾಜು, ನಟೇಶ್, ಜಿ.ಪಂ ಎಇಇ ಮಲ್ಲಿಕಾರ್ಜುನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net