ಸುಳ್ಯ ತಾಯಿ, ಮಗು ಕೆರೆಗೆ ಬಿದ್ದು ಮೃತ್ಯು

images (5)
Published on


ಮಂಗಳೂರು: ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಮಾಪಲಕಜೆ ಎಂಬಲ್ಲಿ ಭಾನುವಾರ ತಾಯಿ ಮತ್ತು ಮಗು ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
ಮಾಪಲಕಜೆಯ ಜನಾರ್ದನ ನಾಯಕ್ ಎಂಬವರ ಪುತ್ರಿ ಸಂಗೀತ ಅವರ ಮಗು ಮನೆಯ ಬಳಿಯ ಕೆರೆಗೆ ಕಾಲು ಜಾರಿ ಬಿದ್ದಿದೆ. ಮಗುವನ್ನು ರಕ್ಷಿಸಲು ಸಂಗೀತ ಪ್ರಯತ್ನಿಸುವ ಸಂದರ್ಭ ಈಜು ಬಾರದ ಅವರು ಕೂಡ ನೀರಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ. ತಾಯಿಯ ಮೃತದೇಹ ಕೆರೆಯಿಂದ ಹೊರ ತೆಗೆಯಲಾಗಿದೆ. ಮಗುವಿಗಾಗಿ ಅಗ್ನಿಶಾಮಕದಳದವರು ಹುಡುಕಾಟ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net