ಸುಲೇಪೇಟನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

IMG-20230830-WA0060
Published on

ಚಿಂಚೋಳಿ: ಸದೃಢ ದೇಹದಲ್ಲಿ ಸದೃಢ ಮನಸ್ಸು ಇರಬೇಕಾದರೆ ಕ್ರೀಡೆ ಅತ್ಯಂತ ಅವಶ್ಯಕ ಹಾಗೂ ನಿಮಗೆ ಇಷ್ಟವಾಗುವ ಯಾವುದೇ ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಲ್ಲಿ ಸಾಧನೆ ಮಾಡಿ ಎಂದು ದೈಹಿಕ ಶಿಕ್ಷಕ ಪ್ರೇಮನಾಥ್ವಿ ಬಿರಾದಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಲೂಕಿನ ಸರ್ಕಾರಿ ಕನ್ಯಾ ಪ್ರೌಢಶಾಲೆ ಸುಲೇಪೇಟ್ ನಲ್ಲಿ ಹಾಕಿ ಕ್ರೀಡಾ ಮಾಂತ್ರಿಕ ಎಂದೇ ಹೆಸರಾದ ಮೇಜರ್ ಧ್ಯಾನ್ ಚಂದ್ ರವರ 118 ನೇ ಜನ್ಮ ಜಯಂತಿ ನಿಮಿತ್ತವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕ್ರೀಡೆ ಪ್ರತಿಯೊಬ್ಬರ ಹವ್ಯಾಸವಾಗಬೇಕು ಎಂದರು.

ಮೇಜರ್ ಧ್ಯಾನಚಂದ ಅವರು ಆದರ್ಶಗಳನ್ನು ಜೀವನದಲ್ಲಿ ಸದಾ ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಆರೋಗ್ಯದೊಂದಿಗೆ ಬದುಕು ರೂಪಿಸಿಕೊಳ್ಳಲು ಯುವ ಪೀಳಿಗೆ ಮುಂದಾಗಬೇಕು ಎಂದು ಮಾತನಾಡಿದರು.

ಇದಕ್ಕೂ ಮುಂಚೆ ಸುಲೇಪೇಟ ಪ್ರಮುಖ ಬೀದಿಗಳಲ್ಲಿ ಕ್ರೀಡಾ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ನಡೆಸಿದರು.

ವಿವಿಧ ಕ್ರೀಡೆಗಳಲ್ಲಿ ಗೆಲುವು ಸಾಧಿಸಿದ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಸುರೇಶ್ ವಾಲೀಕರ್, ವೇದಕುಮಾರ ಶಾಸ್ತ್ರಿ, ಸುನೀತಾ ಕಲ್ಲೂರ್,ಶಿಕ್ಷಕಿ ಭಾಗ್ಯಶ್ರೀ, ಬಸವರಾಜೇಶ್ವರಿ,ಕು: ಸೌಮ್ಯ, ಭಾಗ್ಯಶ್ರೀ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net