

ಚಿಂಚೋಳಿ: ಸುಲೇಪೇಟ್ ಗ್ರಾಮದ ಅಂಬಾ ಭವಾನಿ ಭವನದಲ್ಲಿ ಎಲ್.ಆಂಡ್ ಟಿ ಫೈನಾನ್ಸ್ ಹಣಕಾಸಿನ ನೆರವಿನೊಂದಿಗೆ ಎಎಲ್.ಎಫ್ ಸಂಸ್ಥೆ ಅನುಷ್ಠಾನಗೊಳಿಸುತ್ತಿರುವ ಡಿಜಿಟಲ್ ಸಖಿ ಯೋಜನೆಯಿಂದ ಭಾನುವಾರ ಮಹಿಳಾ ಸಮಾನತೆ ದಿನ ಆಚರಣೆ ಮಾಡಲಾಯಿತು.
ಸುಲೇಪೇಟ್ ಠಾಣೆಯ ಪಿ.ಎಸ್.ಐ ನಂದಿನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸನಾತನ ಕಾಲದಿಂದಲೂ ಮಹಿಳೆ, ಪುರುಷನ ಸರಿ ಸಮಾನವಾಗಿ ದುಡಿಯುತ್ತ ಬಂದಿದ್ದಾಳೆ. ಆಕೆಯ ದುಡಿಮೆ ಹಾಗೂ ತ್ಯಾಗ ಜತೆಗೆ ಮನೆಯವರ ಸಹಕಾರದಿಂದ ಅವಳು ಕುಟುಂಬ ಅಭಿವೃದ್ಧಿಗೆ ದುಡಿಯುತ್ತಾಳೆ. ದೇಶದ ಅಭಿವದೃದ್ಧಿಯಲ್ಲೂ ಆಕೆಯ ಕೊಡುಗೆ ಅಪಾರವಾದದ್ದು, ಶತಮಾನಗಳಿಂದಲೂ ಮಹಿಳೆಯನ್ನು ಈ ಸಮಾಜ ವಿಶೇಷ ಗೌರವ ಮತ್ತು ಪೂಜ್ಯನಿಯವಾಗಿಯೇ ನೋಡುತ್ತಾ ಬಂದಿದೆ ಎಂದರು.
ಡಿಜಿಟಲ್ ಸಖಿ ಯೋಜನೆಯ ಕ್ಲಸ್ಟರ್ ಮ್ಯಾನೇಜರ್ ಗುರು ಪಿ.ಹೆಚ್ ಮಾತನಾಡಿ, ನಮ್ಮ ಯೋಜನೆಯು ನಮ್ಮ ಗ್ರಾಮದ ಪ್ರತಿ ಕುಟುಂಬದ ಸದಸ್ಯರಿಗೆ ಅದರಲ್ಲೂ ಹೆಚ್ಚು ಹೆಚ್ಚು ಮಹಿಳೆಯರಿಗೆ ತಾಂತ್ರಿ ಆರ್ಥಿಕ ಸೇರ್ಪಡೆಯ ಕುರಿತು ಹೆಚ್ಚು ಹೆಚ್ಚು ತಿಳಿಸುವ ಕೆಲಸ ಮಡುತ್ತಿದೆ. ಜೊತೆಗೆ ಸರಕಾರದ ಪ್ರತಿಯೊಂದು ಯೋಜನೆ ಪ್ರತಿಯೊಬ್ಬರಿಗೂ ತಲುಪಿಸಲು ಸಮುದಾಯ ಮತ್ತು ಸರಕಾರಗಳ ಮಧ್ಯೆ ಸಂಬಂದ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ರಾಠೋಡ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಸದಸ್ಯರಾದ ಭಾರತಿ ಅಮರೇಶ್ ಗುಣಿ, ಸವಿತಾ, ಪ್ರಮುಖರಾದ ಶಿವಕಾಂತಮ್ಮ ಸ್ವಾಮೀ, ಸಂಗೀತಾ, ಸವೀತಾ, ನೀಲಮ್ಮ, ಸುನೀತಾ, ಮಾಯದೇವಿ, ಸುಹಾಸಿನಿ, ಲಕ್ಷ್ಮಿ ರೆಡ್ಡಿ, ಶರಣಮ್ಮ ಇತರರಿದ್ದರು.