

ಕಲಬುರಗಿ: ಜನರನ್ನು ಸುಲಿಗೆ ಮಾಡುವ ವಿವಿಧ ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ಬಂಧಿಸಿ ಆತನಿಂದ ೮.೩೫ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ವಸ್ತುಗಳನ್ನು ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ನಗರದ ಎಂಎಸ್‌ಕೆ ಮಿಲ್‌ನ ನಬಿ ಕಾಲನಿ ನಿವಾಸಿ ಸೈಯದ್ ಇಬ್ರಾಹಿಮ್ ಅಬ್ಬು ಬಂಧಿತ ಆರೋಪಿ. ಬಂಧಿತನಿAದ ೧೦೫ ಗ್ರಾಂ ಬಂಗಾರ ಮತ್ತು ೭೫ ಗ್ರಾಂ ಬೆಳ್ಳಿ, ೧ ಮೊಬೈಲ್ ಸೇರಿ ಒಟ್ಟು ೮.೩೫ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಮಲ್ಲಿಕಾರ್ಜುನ ಅಂಬರಾಯ ದಿವಂಟಗಿ ತಮ್ಮ ಹೊಲದಲ್ಲಿನ ಬೆಳೆಗಳಿಗೆ ನೀರು ಬಿಡಲು ಹೋಗಿದ್ದ ವೇಳೆ ಅಪರಿಚಿತರು ನಾಲ್ವರು ಎರಡು ಬೈಕ್ ಮೇಲೆ ಬಂದು ಹಣ, ಬೈಕ್ ಹಾಗೂ ಮೊಬೈಲ್ ಸುಲಿಗೆ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಪ್ರಕರಣದ ತನಿಖೆಗೆ ಎಸಿಪಿ ಡಿ.ಜಿ ರಾಜಣ್ಣ ನೇತೃತ್ವದಲ್ಲಿ ವಿವಿ ಪೊಲೀಸ್ ಠಾಣೆ ಪಿಐ ಸುಶೀಲಕುಮಾರ, ಪಿಎಸ್‌ಐ ಅನೀಲ ಜೈನ್ ಹಾಗೂ ಸಿಬ್ಬಂದಿ ಸಂಜಯಕುಮಾರ, ಪ್ರಕಾಶ ಬಿರನೂರ, ರಾಜಕುಮಾರ ಪವಾರ, ಪ್ರಕಾಶ ಬಾಗೇವಾಡಿ, ಕಿಶೋರ, ಸುಲ್ತಾನ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ವಾಜಪೇಯಿ ಬಡಾವಣೆ ಹತ್ತಿರ ಪೊಲೀಸರನ್ನು ನೋಡಿ ಓಡಿ ಹೋಗುತ್ತಿದ್ದ ವೇಳೆ ಬೆನ್ನಟಿ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಇಮ್ರಾನ ಶೇಖ್, ಶಾರುಖ್ ಕೂಡಿ ನಗರದ ಝಾಪೂರ ಗುಡ್ಡ, ಭೋಪಾಲ ತೆಗನೂರ, ಶಹಾಬಾದ ರೋಡ, ಚಿಂಚೋಳಿ ಲೇ ಔಟ್‌ನಲ್ಲಿ ಸುಲಿಗೆ ಮಾಡಿದ ಬಾಯಿಬಿಟ್ಟಿದ್ದಾನೆ. ನಾಲ್ಕು ಪ್ರಕರಣಗಳಲ್ಲಿ ಸೈಯದ್ ಇಬ್ರಾಹಿಮ್ ಅಬ್ಬು ಆರೋಪಿತನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.