ಸುಲಿಗೆ ಆರೋಪಿ ಬಂಧನ

IMG_20230527_200301.jpg
Published on

ದಾವಣಗೆರೆ: ನಗರದಲ್ಲಿ ಪಾದಚಾರಿ ಮಹಿಳೆಯೊಬ್ಬರ ಬ್ಯಾಗ್ ಸುಲಿಗೆ ಮಾಡಿ ಪರಾರಿಯಾಗಿದ್ದ, ದಾವಣಗೆರೆ ತಾಲೂಕಿನ ಪುಟಗನಾಳು ಗ್ರಾಮದ ಆರೋಪಿ ಯಲ್ಲಪ್ಪನನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಏ.24ರಂದು ನಗರದ ಮಹಾಲಕ್ಷ್ಮೀ ಲೇ ಔಟ್‌ನಲ್ಲಿ ಮಗಳೊಂದಿಗೆ ಉಷಾ ಸಂಚರಿಸುತ್ತಿದ್ದರು. 5 ಸಾವಿರ ನಗದು ಹಾಗೂ ಒಂದು ಮೊಬೈಲ್ ಫೋನ್, ದಾಖಲಾತಿಗಳಿದ್ದ ಅವರ ಬ್ಯಾಗ್ ಅನ್ನು ಹಿಂಬದಿ ಬೈಕ್‌ನಲ್ಲಿ ಬಂದ ಆರೋಪಿ ಕಿತ್ತುಕೊಂಡು ಪರಾರಿಯಾಗಿದ್ದ. ವಿದ್ಯಾನಗರ ಠಾಣೆ ಪಿಐ ಪ್ರಭಾವತಿ ಸಿ ಶೇತಸನದಿ, ಸಂಚಾರಿ ವೃತ್ತದ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಪಿ ಅನಿಲ್ ನೇತೃತ್ವದ ಸಿಬ್ಬಂದಿ ಆರೋಪಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ 30 ಸಾವಿರ ರೂ. ಮೌಲ್ಯದ ಬೈಕ್ ಹಾಗೂ ಕಳವು ಮಾಡಿದ್ದ ಸಾಮಗ್ರಿ ವಶಪಡಿಸಿಕೊಂಡಿದೆ. ---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net