

ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಶುಕ್ರವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಸುರೇಶ ಚೌಗುಲೆ, ಉಪಾಧ್ಯಕ್ಷರಾಗಿ ಶುಭಂ ಕಾಟಕರ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಕೇವಲ ಒಂದೇ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಸಹಕಾರಿ ರಿಟರ್ನಿಂಗ್ ಅಧಿಕಾರಿ ಹಾಗೂ ಚಿಕ್ಕೋಡಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಕಚೇರಿ ದ್ವಿತೀಯ ದರ್ಜೆ ಸಹಾಯಕ ಗುರುಪ್ರಸಾದ ಕುಲಕರ್ಣಿ ಘೋಷಿಸಿದರು.
ಬಳಿಕ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಮುಖಂಡರಾದ ಅಪ್ಪಾಸಾಹೇಬ ಕುರುಂದವಾಡೆ, ಭೀಮು ಬೋಲೆ, ರಾಜೇಂದ್ರ ಚೌಗುಲೆ, ಮಹಾವೀರ ಕಾತ್ರಾಳೆ, ರಾಜೇಂದ್ರ ಅಕಿವಾಟೆ, ಸಹಕಾರಿ ಸದಸ್ಯರಾದ ಅಭಯಕುಮಾರ ಅಕಿವಾಟೆ, ರುದ್ರಗೌಡ ಪಾಟೀಲ, ಕಿರಣ ಬೋಲೆ, ಶಿವಾನಂದ ಪಾಟೀಲ, ಅಪ್ರೋಜ ಕನವಾಡೆ, ಜ್ಯೋತಿ ಪೋದಾಲೆ, ಸಂಜೀವಿನಿ ಕಾಗವಾಡೆ, ಮುಕಾರಿ ವಡ್ಡರ, ಅಪ್ಪಾಸಾಹೇಬ ಕೋಳಿ, ಶೋಭಾ ಶಿರಗುಪ್ಪೆ, ವಿಜಯ ಅಕಿವಾಟೆ, ಬ್ಯಾಂಕ್ ನಿರೀಕ್ಷಕ ಎಸ್.ಎಸ್. ಬುರುಡ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೇಣಿಕ ಮಾಂಗೂರೆ ಇತರರಿದ್ದರು.