ಸುರೇಶ ಅಂಗಡಿ ನಿಧನ ತುಂಬಲಾರದ ನಷ್ಟ

24 MADIVALA 2
Published on

ಮಡಿವಾಳ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ನಿಧನದ ಹಿನ್ನೆಲೆಯಲ್ಲಿ ಮಾಲೂರು ತಾಲೂಕಿನ ಬೆಳ್ಳಾವಿ ಸಂಸ್ಥಾನ ಮಠ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಕಚೇರಿ ಆವರಣದಲ್ಲಿ ಗುರುವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದ ಸುರೇಶ ಅಂಗಡಿ ರಾಜ್ಯದ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ವಾಡಿಸಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 4 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರ ನಿಧನ ಸಮುದಾಯಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಮಠದ ಪಟ್ಟದ ಮಹಾಂತ ಶಿವಾಚಾರ್ಯ ಸ್ವಾಮೀಜಿ ಪ್ರಾರ್ಥಿಸಿದರು.

ಮಹಾಸಭಾ ಅಧ್ಯಕ್ಷ ಶಿವಶಂಕರಯ್ಯ, ಉಪಾಧ್ಯಕ್ಷ ಕೆ.ವಿ.ಚನ್ನವೀರದೇವರು, ಪ್ರಧಾನ ಕಾರ್ಯದರ್ಶಿ ಪಿ.ಶಶಿಧರ್, ಕಾರ್ಯದರ್ಶಿ ಬಿ.ವಿ.ಸೋಮಶೇಖರ್, ಖಜಾಂಚಿ ಬಿ.ಜಿ.ರೇಣುಕ ಪ್ರಸಾದ್, ಮಹಿಳಾ ಕಾರ್ಯದರ್ಶಿ ಉವಾದೇವಿ ನಾಗರಾಜಯ್ಯ, ಯುವ ಟಕದ ಗೌರವಾಧ್ಯಕ್ಷ ಮಂಜುನಾಥ್, ಅಧ್ಯಕ್ಷ ಸುಮನ್, ಪತ್ರಿಕಾ ಕಾರ್ಯದರ್ಶಿ ನಂಜುಂಡಪ್ಪ. ಕೆ.ಬಿ.ರಾಜು, ಕೆ.ಎಸ್.ರಾಜಶೇಖರಯ್ಯ, ಬಿ.ಉಮೇಶ್, ವೆಂಕಟೇಶಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net