ಸುರಪಾನಕ್ಕೆ ಸರದಿ ನಿಂತ ಮದ್ಯ ಪ್ರಿಯರು

IMG-20200504-WA0014.jpg
Published on

ರಾಯಚೂರು: ನಲ್ವತ್ತು ದಿನ ಅರೆಬರೆ, ಕಳ್ಳತನದಿಂದ ಕುಡಿದು ಕಾಲ ಕಳೆದ ಮದ್ಯಪ್ರಿಯರು ಬೆಳ್ಳಂ ಬೆಳಗ್ಗೆ ವೈನ್ ಶಾಪ್ ಗಳ ಮುಂದೆ ಮದ್ಯ ಪಡೆಯಲು ಜಿಲ್ಲಾದ್ಯಂತ ಸರದಿಯಲ್ಲಿ ನಿಂತು ಸುರಪಾನಕ್ಕೆ ಹಾತೋರೆದರು.

ಜಿಲ್ಲೆಯ ನಗರ, ಪಟ್ಟಣದ ವಿವಿಧ ರಸ್ತೆಗಳಲ್ಲಿ ಇರುವ ಸಿಎಲ್ ೨ ಹಾಗೂ ೧೧ ಸಿಯ ಎಮ್ ಎಸ್ಐಎಲ್ ಮುಂದೆ ಶಿಸ್ತಿನೊಂದಿಗೆ ಸೋಮವಾರ ಸರದಿ ನಿಂತು ಕುಡುಕರು ಪರಸ್ಪರ ಶುಭಾಶಯ, ಆತ್ಮೀಯತೆಯೊಂದಿಗೆ ಅನುಭವಿಸಿದ ಸಂಕಟವನ್ನು ತೋಡಿಕೊಳ್ಳು ತ್ತಿರುವುದು ಕಂಡು ಬಂದಿತು.ಬೆಳಗ್ಗೆ ಎಲ್ಲಿಲ್ಲದ ಗಡಿಬಿಡಿಯೊಂದಿಗೆ ಸ್ನಾನ ಮುಗಿಸಿ ಹೊರ ಬಂದ ಮದ್ಯಪ್ರಿಯರನ್ನು ಕಂಡ ಮನೆಯವರೇ ಅವಕ್ಕಾದ ಪ್ರಸಂಗಗಳು ಜರುಗಿವೆ. ಬಿಸಿಲು ನೆತ್ತಿಗೇರುವುದರೊಳಗೆ ಮರಳಿ ಮನೆ ಸೇರುವ ತವಕದೊಂದಿಗೆ ವೈನ್ ಶಾಪ್ ಗಳತ್ತ ಹೆಜ್ಜೆ ಹಾಕಿದ್ದರು. ಜನದಟ್ಟಣೆಯ ನಿಯಂತ್ರಣ ಕ್ಕೆ ಬ್ಯಾರಿಕೇಡ್, ಕಟ್ಟಿಗೆ ಕಟ್ಟಿದ ಶಾಪ್ ಮಾಲೀಕರು.
ಮಾಸ್ಕ್ ಧರಿಸದವರಿಗೆ ಮಾಸ್ಕ್ ವಿತರಣೆ, ಕೈಗೆ ಸ್ಯಾನಿಟೈಸರ್ ಹಾಕಿ ಸಾಮಾಜಿಕ ಅಂತರಕ್ಕೆ ಸೂಚಿಸುತ್ತಿದ್ದರು.ಮಾಲೀಕರು ಹಾಗೂ ಪೊಲೀಸರಿಂದ ಮಾಸ್ಕ್ ಹಾಕದವರಿಗೆ ಮದ್ಯ ಇಲ್ಲ ಎನ್ನುವುದನ್ನು ಕೇಳಿದ ಜನ ತಮ್ಮಲ್ಲಿರುವ ಬಟ್ಟೆ, ಕರವಸ್ತ್ರ ಕಟ್ಟಿಕೊಂಡು ಮದ್ಯ ಪಡೆಯಲು ಸಿದ್ದರಾದರು.
ಸದ್ಯ ಸ್ಟಾಕ್ ಇರುವ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಮಧ್ಯಾಹ್ನ ಹೊಸದಾಗಿ ಸ್ಟಾಕ್ ತರುವ ಪ್ರಯತ್ನದಲ್ಲಿ ಅಂಗಡಿ ಮಾಲೀಕರು. ಬೆಳಗ್ಗೆ ೯ ರಿಂದ ರಾತ್ರಿ ೭ ರವರೆಗೆ ವೈನ್ ಶಾಪ್ ತೆಗೆಯಲು ಅವಕಾಶ ನೀಡಿದ ಅಬಕಾರಿ ಇಲಾಖೆ. ಜಿಲ್ಲೆಯಲ್ಲಿ ಸುಮಾರು ೩೦ಕ್ಕೂ ಅಧಿಕ ಅಂಗಡಿಗ ಳು ಆರಂಭವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net