

ಚಿತ್ರದುರ್ಗ: ಆರೋಗ್ಯ ಇಲಾಖೆ ಜಿಲ್ಲಾ ಅಂಧತ್ವ ನಿವಾರಣ ವಿಭಾಗದಿಂದ ಜಿಲ್ಲಾಸ್ಪತ್ರೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ‘ಶುಭ ದೀಪಾವಳಿ ಸುರಕ್ಷಿತ ದೀಪಾವಳಿ’ ಜನ ಜಾಗೃತಿ ಕಾರ‌್ಯಕ್ರಮವನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಉದ್ಘಾಟಿಸಿದರು.
ಬೆಳಕಿನ ಹಬ್ಬ ದೀಪಾವಳಿ ಸಂತಸದೊಂದಿಗೆ ಸುರಕ್ಷಿತವಾಗಿರಲಿ. ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಿ. ಪಟಾಕಿ ಗಳಿಂದ ಹೊರಹೊಮ್ಮವ ವಿವಿಧ ರಾಸಾಯನಿಕಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಮುಖ್ಯವಾಗಿ ಕಣ್ಣುಗಳಿಗೆ ಹಾನಿ ಉಂಟು ಮಾಡುವ ಅಪಾಯವಿರುತ್ತದೆ. ಬೆಳಕಿನ ಹಬ್ಬದಲ್ಲಿ ಕಣ್ಣಿನ ಬೆಳಕನ್ನು ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ರವೀಂದ್ರ ನಾಗರಿಕರಿಗೆ ಸಲಹೆ ನೀಡಿದರು.
ಹಿರಿಯ ನೇತ್ರತಜ್ಞ ಡಾ.ಬಿ.ಜಿ.ಪ್ರದೀಪ್ ಮಾತನಾಡಿ, ಪಟಾಕಿ ಅವಘಡಗಳಿಂದ ಕಣ್ಣುಗಳಿಗೆ ಆಗುವ ಹಾನಿಯನ್ನು ತಪ್ಪಿಸಲು, ಜಿ ಲ್ಲಾಸ್ಪತ್ರೆಯ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗವು, ಹಬ್ಬದ ದಿನಗಳಲ್ಲಿ ದಿನದ 24 ಗಂಟೆ ಸೇವೆಗೆ ಸಜ್ಜಾಗಿದೆ. ಪಟಾಕಿಯಿಂದ ದೃಷ್ಟಿ ಕಳೆದುಕೊಂಡರೆ ಪುನಃ ಪಡೆಯಲಾಗದು. ಪಟಾಕಿಯಿಂದ ಆಕಸ್ಮಿಕವಾಗಿ ಕಣ್ಣಿಗೆ ಹಾನಿಯಾದರೆ ಸ್ವಚ್ಛ ಕರ ವಸ್ತ್ರದಿಂದ ಕಣ್ಣನ್ನು ಮುಚ್ಚಿ ಕೊಳ್ಳಬೇಕು.
ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜುವುದು, ನೀರಿನಿಂದ ತೊಳೆಯದೆ ಕೂಡಲೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ತೆರಳಿ ತುರ್ತು ಚಿಕಿತ್ಸೆ ಪಡೆಯ ಬೇಕೆಂದರು. ಇದೇ ವೇಳೆ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ಶುಭಕೋರಿ ಬೀಳ್ಕೋ ಡಲಾಯಿತು.
ಡಾ.ಚಂದ್ರಶೇಖರ ರಾಜು, ಜಿಲ್ಲಾ ನೇತ್ರಾಧಿಕಾರಿಗಳಾದ ಕೆ.ಸಿ.ರಾಮು, ಪುಷ್ಪಲತಾ, ಲಕ್ಷ್ಮೀ, ರವಿಕುಮಾರ್, ಬೆಳಗಟ್ಟ ಆರೋಗ್ಯ ನಿ ರೀಕ್ಷಣಾಧಿಕಾರಿ ಡಿ.ಮಹೇಶ್, ಯೋಗ ತರಬೇತುದಾರ ರವಿ ಕೆ.ಅಂಬೇಕರ್, ಎಂ.ಆರ್.ಮಂಜುನಾಥ್ ಇತರರು ಇದ್ದರು.
(ಸಿಟಿಡಿ 11 ಡಿಎಸ್. ಡಾ.ಎಸ್.ಪಿ.ರವೀಂದ್ರ)