ಸುರಕ್ಷತಾ ಚಾಲನೆಗೆ ಆದ್ಯತೆ ನೀಡಿ

13sunti01
Published on

ಸುಂಟಿಕೊಪ್ಪ: ಚಾಲಕರು ಸುರಕ್ಷತಾ ಚಾಲನೆಗೆ ಆದ್ಯತೆ ನೀಡುವುದರ ಜತೆಗೆ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಬಿ.ತಿಮ್ಮಪ್ಪ ಸೋಮವಾರ ಸಲಹೆ ನೀಡಿದರು.

ಸಂಚಾರ ನಿಯಮ ಉಲ್ಲಂಘಿಸುವ ದ್ವಿಚಕ್ರ ವಾಹನ ಸವಾರರು ಮತ್ತು ಚಾಲಕರಿಗೆ ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಗುಲಾಬಿ ಹೂ ನೀಡಿ ನಿಯಮ ಪಾಲಿಸುವಂತೆ ಅರಿವು ಮೂಡಿಸಿದರು.

ಕಾನೂನು ಉಲ್ಲಂಘಿಸಿದರೆ ಸಾವಿರಾರು ರೂ. ದಂಡ ತೆರಬೇಕಾಗುತ್ತೆ. ಎಲ್ಲರೂ ನಿಯಮ, ಕಾನೂನು ಪಾಲಿಸುವುದರಿಂದ ದಂಡ ಹಾಗೂ ತಮ್ಮ ಅಮೂಲ್ಯ ಜೀವವನ್ನು ಸಂರಕ್ಷಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.

ಎಎಸ್‌ಐ, ಪೊಲೀಸ್ ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಆಟೋ ಚಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net