ಸುರಕ್ಷತಾ ಕ್ರಮಗಳಿಲ್ಲದೆ ಇಂಧನ ಸಾಗಿಸುತ್ತಿದ್ದ ವಾಹನ ವಶ

2
Published on

ತುಮಕೂರು: ಮುಂಜಾಗ್ರತೆ ಪರಿಕರಗಳಿಲ್ಲದೆ, ಯಾವುದೇ ಅನುಮತಿಯೂ ಇಲ್ಲದೆ ತುಮಕೂರಿನ ಕೈಗಾರಿಕೆ ವಲಯಕ್ಕೆ ಡೀಸೆಲ್ ಸರಬರಾಜು ಮಾಡುತ್ತಿದ್ದ ವಾಹನವನ್ನು ಜಿಲ್ಲಾ ವರಿಷ್ಠಾಧಿಕಾರಿ ಕಚೇರಿ ಮುಂಭಾಗವೇ ಆರ್‌ಟಿಒ ನಿರೀಕ್ಷಕ ಗುರುವಾರ ವಶಕ್ಕೆ ಪಡೆದಿದ್ದಾರೆ.

ಆರ್‌ಟಿಒ ಕಚೇರಿಯ ಬ್ಲಾಕ್ ಲಿಸ್ಟ್‌ನಲ್ಲಿರುವ 407 ಟ್ಯಾಂಕರ್ ಡೀಸೆಲ್ ಸಾಗಿಸುವಾಗ ಆರ್‌ಟಿಒ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದೆ. ವಾಹನ ಮಾಲೀಕ ಮತ್ತು ಚಾಲಕನ ಮೇಲೆ ಮೋಟಾರು ವಾಹನ ಕಾಯ್ದೆ ಅಪಾಯಕಾರಿ ವಾಹನ ಅಡಿ ಕೇಸ್ ದಾಖಲಿಸಲಾಗಿದೆ.

ನಗರದ ಬಹುತೇಕ ಎಲ್ಲ ಪೆಟ್ರೋಲ್ ಬಂಕ್‌ಗಳು ಕೈಗಾರಿಕೆ ವಲಯಕ್ಕೆ ಸ್ವಂತ ವಾಹನದಲ್ಲಿ ಇಂಧನ ಪೂರೈಸುತ್ತಿದ್ದು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಅಪಾಯಕ್ಕೆ ಆಹ್ವಾನಿಸಲಾಗುತ್ತಿದೆ. ಈ ಬಗ್ಗೆ ಸಾರಿಗೆ, ಪೊಲೀಸ್ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net