ಸುಯೋಗ್ ಆಸ್ಪತ್ರೆಯಲ್ಲಿ ಹೃದಯ ತಪಾಸಣೆ ಉಚಿತ

Published on

ಮೈಸೂರು: ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆಯಲ್ಲಿ ಫೆ.26ರಿಂದ ಮಾ.3ರ ವರೆಗೆ ಹೃದ್ರೋಗ ಉಚಿತ ತಪಾಸಣಾ ಶಿಬಿರ ಹಾಗೂ ಆಯ್ದ 10 ಬಡವರಿಗೆ ಉಚಿತ ಆ್ಯಂಜಿಯೋಗ್ರಾಂ, ಆ್ಯಂಜಿಯೋಪ್ಲಾಸ್ಟಿ ನೆರವೇರಿಸಲಾಗುವುದು ಎಂದು ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ತಿಳಿಸಿದರು.
ಫೆ.26ರಂದು ಬೆಳಗ್ಗೆ 10.30ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಕಾಶನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಿ.ಮಾದೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಆಸ್ಪತ್ರೆಯ ನಿರ್ದೇಶಕಿ ಸುಧಾ ಯೋಗಣ್ಣ, ಸಿಇಒ ಡಾ.ಎಂ.ವಿ.ಮಂಜುನಾಥ್ ಇತರರು ಭಾಗವಹಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಧುನಿಕ ದಿನಗಳಲ್ಲಿ ಯುವಕರು, ಮಹಿಳೆಯರಲ್ಲಿಯೂ ಹೃದಯಾಘಾತ ಹೆಚ್ಚಾಗುತ್ತಿದೆ. ಹೃದಯಾಘಾತಕ್ಕೂ ಮುನ್ನ ಸಮಸ್ಯೆಯನ್ನು ಗುರುತಿಸಿವುದು ಮುಖ್ಯ. ಎಷ್ಟೋ ಮಂದಿಗೆ ಸಮಸ್ಯೆ ಇದ್ದರೂ ನಿರ್ಲಕ್ಷೃ ಮಾಡುತ್ತಾರೆ. ಮೊದಲೇ ಗುರುತಿಸಿದರೆ ಹೃದಯಾಘಾತ ತಡೆಗಟ್ಟಬಹುದು. ಅದಕ್ಕಾಗಿ ಸುಯೋಗ್ ಆಸ್ಪತ್ರೆಯಿಂದ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.
ಆಸ್ಪತ್ರೆಯ ಸಿಇಒ ಡಾ.ಎಂ.ವಿ.ಮಂಜುನಾಥ್, ವೈದ್ಯ ಡಾ.ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net