ಸುಮ್ಮನೆ ಹೊರಗಡೆ ತಿರುಗಾಡಬೇಡಿ

21-5hbd1
Published on

ಚಿಟಗುಪ್ಪ: ತಾಲೂಕಿನಲ್ಲಿ ಮೂರು ಕರೊನಾ ಕೇಸ್ಗಳು ಪತ್ತೆಯಾಗಿದ್ದು, ಹೀಗಾಗಿ ಸಾರ್ವಜನಿಕರು ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ ಎಂದು ತಹಸೀಲ್ದಾರ್ ಮಹ್ಮದ್ ಜಿಯಾವುದ್ದೀನ್ ಸಲಹೆ ನೀಡಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ಸಂಚರಿಸಿ ಕರೊನಾ ಜಾಗೃತಿ ಮೂಡಿಸಿದ ಅವರು, ಕಂಟೇನ್ಮೆಂಟ್ ಏರಿಯಾದಲ್ಲಿರುವ ಜನರು ಯಾವುದೇ ಕಾರಣಕ್ಕೂ ಹೊರಗಡೆ ತಿರುಗಾಡಬಾರದು. ಲಾಕ್ಡೌನ್ ಸಡಿಲಿಕೆ ಮಾಡಿದ್ದು, ಹಾಗಂತೆ ಸುಮ್ಮನೆ ತಿರುಗಾಡುವುದು ಸರಿಯಲ್ಲ. ಇನ್ನು ಪ್ರತಿ ಭಾನುವಾರ ಇಡೀ ರಾಜ್ಯ ಸಂಪೂರ್ಣ ಬಂದ್ ಇರಲಿದ್ದು, ಯಾರು ಮನೆಯಿಂದ ಹೊರಬರಬಾರದು ಎಂದು ತಿಳಿಸಿದರು.
ಪರಸ್ಪರ ಅಂತರ ಕಾಯ್ದುಕೊಳ್ಳದಿರುವುದು, ಮಾಸ್ಕ್ ಮಾಸ್ಕ್ ಧರಿಸದಿರುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿರುವ ಸುಮಾರು 36 ಜನರಿಂದ ತಲಾ 100 ರೂ.ನಂತೆ 3,600 ರೂ. ವಸೂಲಿ ಮಾಡಲಾಗಿದೆ. ಸಾರ್ವಜನಿಕರು ಸಕರ್ಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.
ಕೋವಿಡ್-19 ನೋಡಲ್ ಅಧಿಕಾರಿ ಡಾ. ಗೋವಿಂದರಾವ, ಪುರಸಭೆ ಮುಖ್ಯಾಧಿಕಾರಿ ಆರ್. ಶ್ರೀಪಾದ್ ರಾಜಪುರೋಹಿತ, ಪುರಸಭೆ ಪರಿಸರ ಅಭಿಯಂತರ ಪೂಜಾ ಪನ್ನಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕ ಉಮೇಶ ಗುಡ್ಡದ, ಕಿರಿಯ ಆರೋಗ್ಯ ನಿರೀಕ್ಷಕ ರವಿಕುಮಾರ, ಪ್ರಮುಖರಾದ ವೈಶಾಲಿ, ಮಹಾರುದ್ರಪ್ಪ ಉಡಬಾಳ, ರಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net