ಸುಮಂಗಲಿಯರಿಗೆ ಸ್ವರ್ಣಗೌರಿ ಬಾಗಿನ, ಗಣೇಶ ವಿತರಣೆ

11web
ಗೌರಿ-ಗಣೇಶ ಹಬ್ಬದ ಅಂಗವಾಗಿ ನಗರದ ಶ್ರೀಅಭಯಂ ಫೌಂಡೇಷನ್‌ನಿಂದ 108 ಸುಮಂಗಲಿಯರಿಗೆ ಸ್ವರ್ಣಗೌರಿ ಬಾಗಿನ ಹಾಗೂ 108 ಭಕ್ತ ಕುಟುಂಬಗಳಿಗೆ ಸಾಂಪ್ರದಾಯಿಕ ಗೌರಿ ಮತ್ತು ಗಣೇಶ ವಿತರಿಸಲಾಯಿತು.
Published on

ಮೈಸೂರು: ಗೌರಿ-ಗಣೇಶ ಹಬ್ಬದ ಅಂಗವಾಗಿ ನಗರದ ಶ್ರೀಅಭಯಂ ಫೌಂಡೇಷನ್‌ನಿಂದ 108 ಸುಮಂಗಲಿಯರಿಗೆ ಸ್ವರ್ಣಗೌರಿ ಬಾಗಿನ ಹಾಗೂ 108 ಭಕ್ತ ಕುಟುಂಬಗಳಿಗೆ ಸಾಂಪ್ರದಾಯಿಕ ಗೌರಿ ಮತ್ತು ಗಣೇಶ ವಿತರಿಸಲಾಯಿತು.
ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವ ನೆನಪಿನಲ್ಲಿ ಭಾರತೀಯ ನೌಕಾಪಡೆಯ ವೈ.ಆರ್.ರಾಜುಶೆಟ್ಟಿ, ಗಿರಿಜಾರಾಜು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಧಾರ್ಮಿಕ ಚಿಂತಕ ಕೆ ರಘುರಾಂ ವಾಜಪೇಯಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ, ಸಹಬಾಳ್ವೆಯ ಜೀವನ ನಡೆಸಲು ಸಾಧ್ಯ. ದೇಶದಲ್ಲಿ ಅನೇಕ ಜಾತಿ, ಧರ್ಮ, ದೇವರು ಹಾಗೂ ಸಂಸ್ಕೃತಿ, ಸಂಪ್ರದಾಯ ಇದ್ದರೂ ಎಲ್ಲರೂ ತಮ್ಮ, ತಮ್ಮ ನಂಬಿಕೆಗೆ ಅನುಗುಣವಾಗಿ ಜೀವನ ಸಾಗಿಸುತ್ತಿದ್ದಾರೆ ಎಂದರು.
ಮೇಲುಕೋಟೆ ವಂಗೀಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಶ್ರೀ ಅಭಯಂ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಎಸ್.ಮುರಳೀಧರ್ ಶಾಸ್ತ್ರಿ, ಉದ್ಯಮಿ ಡಾ.ಎಸ್.ವೆಂಕಟೇಶ್, ಒಂಟಿಕೊಪ್ಪಲು ಶ್ರೀಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಜಿ.ಸಿ. ಪುಟ್ಟಸ್ವಾಮಿ, ಕಂದಾಯ ಅಧಿಕಾರಿ ಬಿ.ಟಿ. ಧನಲಕ್ಷ್ಮಿ, ಚಾಮುಂಡೇಶ್ವರಿ ದೇವಾಲಯ ಧರ್ಮದರ್ಶಿ ಸವಿತಾ ಘಾಟ್ಕೆ, ಧಾರ್ಮಿಕ ಚಿಂತಕರಾದ ಸೌಭಾಗ್ಯ, ಚಕ್ರಪಾಣಿ, ಮೋಹನ್, ವೆಂಕಟೇಶ್, ವರಲಕ್ಷ್ಮಿ ಅಜಯ್, ಮಂಜುಳಾ ರಮೇಶ್, ಮಮತೆಯ ಮಡಿಲು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಪ್ರಭಾ, ವಕೀಲರಾದ ಹೇಮಲತಾ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net