

ಹುಮನಾಬಾದ್: ಅಧಿಕ ಶ್ರಾವಣ ಮಾಸದ ಅಂಗವಾಗಿ ಪಟ್ಟಣದ ನಗರೇಶ್ವರ ದೇವಸ್ಥಾನದ ಹತ್ತಿರ ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್ಟ್ ಕಚೇರಿಯಲ್ಲಿ ಮಂಗಳವಾರ ಸುಮಂಗಲಿಯರಿಗೆ, ಅರಿಶಿಣ, ಕುಂಕುಮ ಸೇರಿದಂತೆ ಮಂಗಳದೃವ್ಯ ವಿತರಣೆ ಮಾಡಲಾಯಿತು.
ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್ಟ್ ಅಧ್ಯಕ್ಷೆ ವಿಜಯಲಕ್ಷ್ಮಿಪಾಟೀಲ ಮಾತನಾಡಿ, ಬೆಂಗಳೂರಿನ ಮಹರ್ಷಿ ಆನಂದ ಗುರುಜೀ ಅವರ ಸಾಲಿ ಗ್ರಾಮ ಆಶ್ರಮದ ಲಕ್ಷ್ಮಿಭುವರಹ ಸ್ವಾಮಿಗೆ ಅರಿಶಿಣ, ಕುಂಕುಮ, ಮಂಗಳದೃವ್ಯದಿಂದ ವಿಶೇಷ ಪೂಜೆ, ಅರ್ಚನೆ ಮಾಡಿಸಿ ಮಂಗಳದೃವ್ಯ ತರಲಾಗಿದ್ದು, ಇಲ್ಲಿ ಆಗಮಿಸಿರುವ ಸುಮಂಗಲಿಯರಿಗೆ ಮಹಾಪ್ರಸಾದವನ್ನು ವಿತರಿಸಲಾಗಿದೆ ಎಂದರು.
ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್‌ನ ಉಪಾಧ್ಯಕ್ಷೆ ಶೋಭಾ ಗುರಮಿಟಕಲ್, ಕಾರ್ಯದರ್ಶಿ ಸುರೇಖಾ ವಿಭೂತಿ, ಕೋಶಾಧ್ಯಕ್ಷೆ ಸುಧಾರಾಣಿ ಪೂಜಾರಿ, ಸದಸ್ಯರಾದ್ ಅನಿತಾ ಚಿದ್ರಿ, ದ್ರೋಪತಿ ಶಮಶಾಬಾದೆ, ವಿಮಲಾ ಸಂಗಮಕರ್, ಅನಿತಾ ಅಶೋಕ, ಉಮಾ ಕುಲಕರ್ಣಿ, ಸೇರಿದಂತೆ ಅನೇಕ ಸುಮಂಗಲೇಯರು ಇದ್ದರು.